vimarsana.com


Sanjevani
ಚಾಮರಾಜನಗರ, ಆ.04: ಶಿವಶರಣ ಹಡಪದ ಅಪ್ಪಣ್ಣ ಅವರು ಶರಣ ಬಸವಣ್ಣನವರ ಸಮಕಾಲೀನರು, ಇವರ ವಚನದಲ್ಲಿರುವ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.
ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಶಿವಶರಣ ಹಡಪದ ಅಪ್ಪಣ ವಚನ ಚಳುವಳಿ ಹಾಗೂ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದಾರೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸದಲ್ಲಿ ಇವರ ವಚನಗಳ ಹಿತನುಡಿಗಳ ಪಾತ್ರ ಹಿರಿದಾದುದಾಗಿದೆ. ಸಮಾಜದಲ್ಲಿನ ಸರ್ವರ ಒಳಿತನ್ನು ಶರಣರು ಬಯಸಿದ್ದರಿಂದ ಎಲ್ಲಾ ವರ್ಗದ ಮುಖಂಡರ ಸಮ್ಮುಖದಲ್ಲಿ ಶಿವಶರಣರ ಜಯಂತಿಗಳು ನಡೆಯಬೇಕು ಎಂದು ಸಿ. ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ ಶಾಂತಮೂರ್ತಿ ಕುಲಗಾಣ ಮಾತನಾಡಿ, ಯಾವುದೇ ಅಪೇಕ್ಷೆ, ಸ್ವಾರ್ಥವಿಲ್ಲದೆ ಸರಳವಾಗಿ ಜೀವನ ನಡೆಸಿದ ಹಡಪದ ಅಪ್ಪಣ್ಣನವರು ಭೇದ ಭಾವವನ್ನು ತೊರೆದು ಎಲ್ಲರಿಗೂ ಸರಳ ಬದುಕನ್ನು ಬೋಧಿಸಿದ ಶರಣರಾಗಿದ್ದಾರೆ. ಅಪ್ಪಣ್ಣ ಅವರು ಒಳಿತು ಕೆಡಕುಗಳು, ಅವುಗಳ ಪರಿಣಾಮಗಳ ಕುರಿತು ಸರಳವಾಗಿ ತಮ್ಮ ವಚನಗಳ ಮೂಲಕ ಜನರಿಗೆ ಜ್ಞಾನದ ಅರಿವನ್ನು ಮೂಡಿಸಿದ್ದಾರೆ ಎಂದು ಹೇಳಿದರು.
ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಚಿನ್ನಸ್ವಾಮಿ ಮಾತನಾಡಿ, ಹಡಪದ ಅಪ್ಪಣ್ಣ ಹಿಂದುಳಿದ ವರ್ಗದಿಂದ ಬಂದಿದ್ದರೂ, ಎಲ್ಲರಿಗೂ ಸಲ್ಲುವಂತ ವಚನಗಳನ್ನು ಬರೆದಿದ್ದಾರೆ ಎಂದು ಬಣ್ಣಿಸಿದರು. ಸವಿತಾ ಸಮಾಜದವರು ತೀರಾ ಹಿಂದುಳಿದ ವರ್ಗದವರಾಗಿದ್ದು, ಸಮಾಜದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ನೆರವು ನೀಡಬೇಕಿದೆ. ಸ್ವಂತ ವೃತ್ತಿ ನಡೆಸಲು ಸಾಲ ಸೌಲಭ್ಯ ಹಾಗೂ ಸಭೆ ಸಮಾರಂಭ ನಡೆಸಲು ಜಿಲ್ಲಾ ಕೇಂದ್ರದಲ್ಲಿ ಸಮುದಾಯ ಭವನ ಒದಗಿಸಿಕೊಡಬೇಕೆಂದು ಹಾಗೂ ಕ್ವೌರಿಕ ವೃತ್ತಿ ನಡೆಸುವವರನ್ನು ಕಾರ್ಮಿಕರೆಂದು ಪರಿಗಣಿಸಿ ಅವರುಗಳಿಗೆ ಆರ್ಥಿಕ ನೆರವು ನೀಡಬೇಕೆಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‍ರಾಜ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಕೆ.ಗಿರೀಶ್, ಜಾನಪದ ಆಕಾಡೆಮಿ ಸದಸ್ಯ ಸಿ.ಎಂ. ನರಸಿಂಹಮೂರ್ತಿ, ಮುಖಂಡರಾದ ಬಸವಣ್ಣ, ಸೋಮಶೇಖರ್, ಕನ್ನಡ ಜಾಗೃತಿ ಸಮಿತಿ ಸದಸ್ಯ ದುಗ್ಗಟ್ಟಿ ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Related Keywords

Hampi ,Karnataka ,India , ,Association District ,Jayanthi Program ,Dc Office ,His Vachanas ,Urban Development ,Her Vachanas ,President Chandra ,ஹம்பி ,கர்நாடகா ,இந்தியா ,சங்கம் மாவட்டம் ,டச் அலுவலகம் ,நகர்ப்புற வளர்ச்சி ,

© 2025 Vimarsana

vimarsana.com © 2020. All Rights Reserved.