vimarsana.com


Sanjevani
ಧಾರವಾಡ ಜು.30-: ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಸಮಾಜ ಹಾಳಾಗುತ್ತದೆ ಎಂಬ ಕೂಗು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುತ್ತಿದೆ. ಆದರೆ ಅದು ಸತ್ಯಕ್ಕೆ ದೂರವಾದುದ್ದು. ವಿಜ್ಞಾನ ಹಾಗೂ ತಂತ್ರಜ್ಞಾನದಿಂದ ವಿಶ್ವ ಅಭಿವೃದ್ಧಿ ಪಥದತ್ತ ಸಾಗಿದೆ ಮತ್ತು ಸಾಗುತ್ತಿದೆ. ಆದರೆ, ಸಮಾಜ ಅದನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಳ್ಳುತ್ತಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನದ ಸದುಪಯೋಗ ಪಡೆಯುವ ಜ್ಞಾನವನ್ನು ಇಂದಿನ ವಿದ್ಯಾರ್ಥಿಗಳಿಗೆ ಮುಂದಿನ ಪೀಳಿಗೆಗಳಿಗೆ ಕೊಡಬೇಕಾದ ಅವಶ್ಯಕತೆಯಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡಮಿ ನಿರ್ದೇಶಕರಾದ ಡಾ. ಎಸ್.ಎಂ. ಶಿವಪ್ರಸಾದ ಅಭಿಪ್ರಾಯಪಟ್ಟರು.
ಅವರು ನೇಚರ ರಿಸರ್ಚ ಸೆಂಟರ, ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಹಾಗೂ ನೇಚರ ಫಸ್ಟ್ ಇಕೋ ವಿಲೇಜ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ‘ವಿಶ್ವ ನಿಸರ್ಗ ಸಂರಕ್ಷಣಾ ದಿನಾಚರಣೆ’ ಕಾರ್ಯಕ್ರಮವನ್ನು ಸಸಿಗೆ ನೀರು ಹನಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಡಾ. ಎಸ್.ಎಂ. ಶಿವಪ್ರಸಾದ ಅವರು, ಇಂದಿನ ಪಠ್ಯ ಕ್ರಮದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಜ್ಞಾನ ನೀಡುವುದರ ಜೊತೆಗೆ ಅವುಗಳ ಕುರಿತಾಗಿ ಪ್ರೀತಿ ಬಿಂಬಿಸುವ ಕಾರ್ಯವಾಗಬೇಕಾಗಿದೆ. ಅದರ ಜೊತೆಗೆ ಪರಿಸರಕ್ಕಾಗಿ ಜೀವನ ಸವಿಸಿದ ಸಾಧಕರ ಕಾರ್ಯಕ್ರಮವನ್ನು ಇಂದಿನ ಮಕ್ಕಳಿಗೆ ತಿಳಿಸಿಕೊಡುವುದರ ಜೊತೆಗೆ ಅವಶ್ಯವಿದೆ ಎಂದರು.
ವಿಶ್ವ ನಿಸರ್ಗ ಸಂರಕ್ಷಣಾ ದಿನಾಚರಣೆಯ ಅಂಗವಾಗಿ ಪರಿಸರಕ್ಕಾಗಿ ದುಡಿದ 38 ಸಾಧಕರನ್ನು ಗುರ್ತಿಸಿ, ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಜನಪ್ರಿಯ ನಾಯಕರಾದ ಬಸವರಾಜ ಬೊಮ್ಮಾಯಿಯವರು ಕರ್ನಾಟಕದ 30ನೇ ಮುಖ್ಯಮಂತ್ರಿಯಾದ ಸಂಭ್ರಮಹೋತ್ಸವದ ನೆನಪಿಗಾಗಿ ಶ್ರೀನಗರ ಬಡಾವಣೆಯಲ್ಲಿ 30 ಗಿಡಗಳನ್ನು ನೆಡಲಾಯಿತು. ಪರಿಸರ ಸಮತಿಯ ಅಧ್ಯಕ್ಷರಾದ ಶಂಕರ ಕುಂಬಿಯವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾರಂಭದಲ್ಲಿ ಕಲಾವತಿ ಹೂಗಾರ ಪ್ರಾರ್ಥಿಸಿದರು. ಪರಿಸರವಾದಿ ಕೆ.ಎಚ್.ನಾಯಕ ಸ್ವಾಗತಿಸಿದರು. ನೇಚರ್ ಫಸ್ಟ್ ಇಕೋ ವಿಲೇಜ ಸಂಸ್ಥಾಪಕರಾದ ಪಿ.ವ್ಹಿ. ಹಿರೇಮಠ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಪರಿಸರ ಸಮಿತಿ ಕಾರ್ಯದರ್ಶಿ ಡಾ. ವಿಲಾಸ ಕುಲಕರ್ಣಿ ವಂದಿಸಿದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ಭೈರಪ್ಪನವರ, ಹರ್ಷವರ್ಧನ ಶೀಲವಂತ, ಬಸವರಾಜ ಕೊರವರ, ಆಯ್.ಎಲ್. ಪಾಟೀಲ, ಬಸವರಾಜ ಕಪಲಿ, ಎಸ್.ಸಿ. ನೀರಾವರಿ, ಶಿವಶರಣ ಕಲಬಶೆಟ್ಟರ, ಸುರೇಶ ವರಪಿ, ಡಾ. ಧೀರೇಜ ಕೆ.ವಿ, ಗಿರೀಶ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Related Keywords

Dharwad ,Karnataka ,India , ,Program Chandra ,World Development ,Dharwad July ,Karnataka State ,Conservation Day ,North Karnataka ,Vishal Karnataka ,Nature First ,தர்வாத் ,கர்நாடகா ,இந்தியா ,உலகம் வளர்ச்சி ,கர்நாடகா நிலை ,பாதுகாப்பு நாள் ,வடக்கு கர்நாடகா ,இயற்கை முதல் ,

© 2025 Vimarsana

vimarsana.com © 2020. All Rights Reserved.