vimarsana.com

Card image cap


Sanjevani
₹ಹರಪನಹಳ್ಳಿ.ಜು.೧೨; ತಾಲೂಕಿನ  ನಾಗತಿಕಟ್ಟೆ ತಾಂಡಾದಲ್ಲಿ ಶಾಸಕ ಜಿ. ಕರುಣಾಕರ ರೆಡ್ಡಿ ಸಿಸಿ ರಸ್ತೆ ಕಾಮಗಾರಿಗೆ  ಚಾಲನೆ ನೀಡಿದರು.ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಹೋಬಳಿಯ ಗಡಿ ಭಾಗದ ನಾಗತಿಕಟ್ಟೆ ತಾಂಡಾದ ಕಾಡಜ್ಜಿ ಮೂಲಕ ದಾವಣಗೆರೆ ತಲುಪುವ ರಸ್ತೆ ಕಾಮಗಾರಿಗೆ ಹರಪನಹಳ್ಳಿ ಶಾಸಕ ಜಿ. ಕರುಣಾಕರ ರೆಡ್ಡಿ  ಚಾಲನೆ ನೀಡಿದರು.ದಾವಣಗೆರೆ ಜಿಲ್ಲಾ ಕೇಂದ್ರದಿಂದ ಕೇವಲ 14 ಕಿ.ಮೀ. ದೂರದಲ್ಲಿರುವ ನಾಗತಿಕಟ್ಟೆ ರಸ್ತೆ ಅಭಿವೃದ್ಧಿಯಿಂದ ವಂಚಿತಗೊಂಡು ಕಲ್ಲು ಮುಳ್ಳುಗಳ ಕಾಡು ರಸ್ತೆಯಂತಾಗಿತ್ತು. ರಸ್ತೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಸಂಬಂಧಿಸಿದ ಇಲಾಖೆಗಳಿಗೆ ತೆರಳಿ ಹಲವು ಬಾರಿ ಮನವಿ ಸಲ್ಲಿಸಿದರೂ ಕಾಮಗಾರಿ ನನೆಗುದಿಗೆ ಬಿದ್ದಿತ್ತು.ಈ ಭಾಗದಲ್ಲಿ ಕಲ್ಲುಗಣಿಕಾರಿಕೆ ಹೆಚ್ಚಾಗಿ ನಡೆಯುವುದರಿಂದ ಭಾರಿ ಪ್ರಮಾಣದ ಲಾರಿಗಳು ಓಡಾಡುತ್ತವೆ. ಹಾಗಾಗಿ ಗುಣಮಟ್ಟದ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು.ಗ್ರಾಮಸ್ಥರ ಮನವಿಯ ಮೇರೆಗೆ ₹ 244.75 ಲಕ್ಷ ವೆಚ್ಚದಲ್ಲಿ ಗ್ರಾಮದ ಹರಪನಹಳ್ಳಿ ವಿಧಾನ ಕ್ಷೇತ್ರದ ಗಡಿಯಿಂದ ದಾವಣಗೆರೆ ಗಡಿಯವರೆಗೂ 2.7 ಕಿ.ಮೀ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ಭಾರದ ಸರಕುಸಾಗಣೆ ಮಾಡುವ ವಾಹನಗಳ ತಡೆಗೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗುವುದು. ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು.ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎನ್. ಮಹೇಶಪ್ಪ, ಸಹಾಯಕ ಎಂಜಿನಿಯರ್‌ ಎಲ್. ಕುಬೇಂದ್ರನಾಯ್ಕ, ಬಿ.ಆರ್. ಪ್ರಕಾಶ್ ನಾಯ್ಕ, ಮಂಜುನಾಥ್, ಕಿರಿಯ ಎಂಜಿನಿಯರ್‌ಗಳಾದ ಎ. ಮಂಜುನಾಥ್, ಬಸವನಗೌಡ ಪಾಟೀಲ್, ಪ್ರಥಮ ದರ್ಜೆ ಗುತ್ತಿಗೆದಾರರಾದ ವೈ. ಶ್ರೀನಿವಾಸ ರೆಡ್ಡಿ, ರಾಜಪ್ಪ ಭೋವಿ, ಸಂಪತ್ ಕುಮಾರ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಂಜ್ಯಾನಾಯ್ಕ, ಮುಖಂಡರಾದ ಆರ್. ಲೋಕೇಶ್, ಯು.ಪಿ. ನಾಗರಾಜ್, ರಾಘವೇಂದ್ರ ಶೆಟ್ಟಿ, ಸಂತೋಷ್, ಕುಮಾರ್ ನಾಯ್ಕ, ಮಂಜ್ಯಾನಾಯ್ಕ, ವೆಂಕಟೇಶ್ ನಾಯ್ಕ, ಶಶಿನಾಯ್ಕ, ಲಿಂಗರಾಜ್ ಇದ್ದರು.

Related Keywords

Bangalore , Karnataka , India , Arsikere , Srinivas Reddy , Raghavendra Shetty , Sampath Kumar , Bangalore District Center , , District Arsikere Parish , Financial Aid , பெங்களூர் , கர்நாடகா , இந்தியா , அரசிகெரெ , ஸ்ரீநிவாஸ் சிவப்பு , ராகவேந்திரா ஷெட்டி , சம்பத் குமார் , நிதி உதவி ,

© 2024 Vimarsana

vimarsana.com © 2020. All Rights Reserved.