ಲಸಿಕೆ ಪಡೆದ, ಪಡೆಯದವರಲ್ಲಿ ಸೋಂಕು ಉಂಟು ಮಾಡುವ ಸಾಮರ್ಥ್ಯವನ್ನು ಕೊರೊನಾ ವೈರಸ್ನ ರೂಪಾಂತರ ಮಾದರಿಯಾದ ‘ಡೆಲ್ಟಾ’ ಹೊಂದಿದೆ ಎಂಬುದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಚೆನ್ನೈನಲ್ಲಿ ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ. ಆದರೆ, ಡೆಲ್ಟಾ ಕಾರಣದಿಂದ ಸಂಭವಿಸುವ ಸಾವಿನ ಸಾಧ್ಯತೆ ಲಸಿಕೆ ಪಡೆದವರಲ್ಲಿ ಕಡಿಮೆ ಎಂಬುದು ತಿಳಿದು ಬಂದಿದೆ.
‘ದೇಶದಲ್ಲಿ ಈವರೆಗೆ 50 ಕೋಟಿಗೂ ಹೆಚ್ಚು ಕೋವಿಡ್–19 ಪರೀಕ್ಷೆಗಳನ್ನು ನಡೆಸಲಾಗಿವೆ. ಈ ತಿಂಗಳ ಸರಾಸರಿ ದೈನಂದಿನ ಪರೀಕ್ಷೆಗಳ ಸಂಖ್ಯೆಯು 17 ಲಕ್ಷಕ್ಕಿಂತ ಹೆಚ್ಚಿದೆ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಗುರುವಾರ ಹೇಳಿದೆ.
೫೦ಕೋಟಿಗೂ ಹೆಚ್ಚು ಜನರಿಗೆ ಸೋಂಕು ಪರೀಕ್ಷೆ sanjevani.com - get the latest breaking news, showbiz & celebrity photos, sport news & rumours, viral videos and top stories from sanjevani.com Daily Mail and Mail on Sunday newspapers.