'ನಮ್ಮ ಮೆಟ್ರೊ' ಎರಡನೇ ಹಂತದಲ್ಲಿ ಮೈಸೂರು ರಸ್ತೆಯಿಂದ ಕೆಂಗೇರಿ ಮೆಟ್ರೊ ನಿಲ್ದಾಣದವರೆಗೆ ನಿರ್ಮಾಣಗೊಂಡಿರುವ ಎತ್ತರಿಸಿದ ಮಾರ್ಗ ಕಾರ್ಯಾಚರಣೆಗೆ ಸನ್ನದ್ಧವಾಗಿದೆ. ಈ ಮಾರ್ಗದ ಹಳಿಗಳ ಹಾಗೂ ನಿಲ್ದಾಣಗಳ ಸುರಕ್ಷತಾ ಅಂಶಗಳನ್ನು ಮೆಟ್ರೊ ರೈಲು ಸುರಕ್ಷತಾ ಆಯುಕ್ತ ಅಭಯ್ ಕುಮಾರ್ ರೈ ಬುಧವಾರ ತಪಾಸಣೆ ನಡೆಸಿದರು.