ದಸರೆಯಲ್ಲಿ ಚಿನ್ನದ ಅಂಬಾರಿ ಹೊರುವುದಷ್ಟೇ ಅಲ್ಲ; ದಾಂದಲೆ ನಡೆಸುವ ಕಾಡಾನೆ ಹಾಗೂ ನರಭಕ್ಷಕ ಹುಲಿ ಸೆರೆ ಕಾರ್ಯಾಚರಣೆಗೂ ಅಭಿಮನ್ಯು ಎತ್ತಿದ ಕೈ. ‘ಜೀವರಕ್ಷಕ’ನಾಗಿಯೂ ಕೆಲಸ ಮಾಡುತ್ತಿದ್ದು, ಮಾವುತ ವಸಂತ ಜೊತೆಗಿದ್ದರೆ ಮತ್ತಷ್ಟು ಧೈರ್ಯದಿಂದ ಮುನ್ನುಗುತ್ತದೆ.
‘ಅಭಿಮನ್ಯು ಆನೆಯನ್ನು ನನ್ನ ಕಾಲಿನಿಂದಲೇ ನಿಯಂತ್ರಿಸುತ್ತೇನೆ. ಕಾಲುಗಳೇ ಬ್ರೇಕ್, ಕ್ಲಚ್ ಹಾಗೂ ಸ್ಟಿಯರಿಂಗ್.’- ಹೀಗೆ ಹೇಳುವಾಗ ಮಾವುತ ವಸಂತ ಅವರ ಮೊಗದಲ್ಲಿ ಮಹತ್ತರವಾದದ್ದನ್ನು ಸಾಧಿಸಿದ ಖುಷಿ ಇಣುಕಿತ್ತು. ಅವರಿಗೆ ಅಭಿಮನ್ಯುವೇ ಜೀವಾಳ.