ಕೆಂಪೇಗೌಡ

ಕೆಂಪೇಗೌಡರ ಕೊಡುಗೆ ಅಪಾರ: ಯತೀಂದ್ರ ಸಿದ್ದರಾಮಯ್ಯ


Sanjevani
ತಿ.ನರಸೀಪುರ. ಜೂ.27: ರಾಜ್ಯದ ರಾಜಧಾನಿ ಬೆಂಗಳೂರು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದು ವಿಶೇಷವಾಗಿ ಗುರುತಿಸಿಕೊಳ್ಳುವಲ್ಲಿ ನಾಡಪ್ರಭು ಕೆಂಪೇಗೌಡ ಅವರ ಕೊಡುಗೆ ಅಪಾರ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ತಿರುಮಕೂಡಲಿನ ಚೌಡಯ್ಯ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿ ಮಾತನಾಡಿದರು. ಕೆಂಪೇಗೌಡ ಅವರು ಎಲ್ಲ ಸಮುದಾಯಗಳಿಗೆ ಅಂದೇ ಅನುಕೂಲ ಮಾಡಿಕೊಟ್ಟಿದ್ದರು. ವ್ಯಾಪಾರ, ಉದ್ಯಮ ಬೆಳವಣಿಗೆಗೆ ಬಹುವಾಗಿ ಶ್ರಮಿಸಿದ್ದಾರೆ. ನಗರದಲ್ಲಿ ನಾನಾ ಹೆಸರಿನ ಪೇಟೆಗಳು ಇವರ ಕಾಲದಲ್ಲಿಯೇ ಆರಂಭವಾದವು. ಪ್ರಮುಖ ದ್ವಾರಗಳನ್ನು ನಿರ್ಮಿಸಿದ ಕೀರ್ತಿಯೂ ಅವರಿಗೇ ಸಲ್ಲುತ್ತದೆ ಎಂದರು.
ಸಮಾಜದ ಅಭಿವೃದ್ಧಿ, ಕಾಳಜಿ, ಕಳಕಳಿ ಹಾಗೂ ಸಾಮಾಜಿಕ ಜವಾಬ್ದಾರಿ ಇರುವಂತಹವರು ಸಿಗುವುದು ಬಹಳ ಕಡಿಮೆ. ವಿಶ್ವದಲ್ಲಿಯೇ ಬೆಂಗಳೂರು ನಗರ ಪ್ರಬುದ್ಧ ಸ್ಥಾನದಲ್ಲಿದೆ ಎಂದರೆ, ಅದರ ಹಿಂದೆ ಇದ್ದ ಕೆಂಪೇಗೌಡ ಅವರ ಚಿಂತನೆ ಹಾಗೂ ತ್ಯಾಗ ಅಪಾರವಾದದ್ದು ಎಂದು ಬಣ್ಣಿಸಿದರು.
ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷ ಆರ್.ಚೇತನ್, ಟಿಎಪಿಸಿಎಂಎಸ್ ನಿರ್ದೇಶಕ ಟಿ.ಸಿ.ಫಣೀಶ್ ಕುಮಾರ್,ಈಶ್ವರ್ ಗೌಡ,ಸೋಮಣ್ಣ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ದೇಗೌಡ,ಎಪಿಎಂಸಿ ಅಧ್ಯಕ್ಷ ಅನಿಲ್ ಕುಮಾರ್, ಜಿಲ್ಲಾ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ,ಬಸವರಾಜ ನಾಯಕ,ಮೆಲ್ಲಹಳ್ಳಿ ರವಿ,ಸುರೇಶ್, ರಾಮ,ಲಕ್ಷ್ಮಣ,ರವಿ,ಬಸ್ ಚೇತನ್, ನಾಗಣ್ಣ,ವೇಣು,ನವೀನ,ಬ್ಯಾಟರಿ ಸತೀಶ್, ಕಾರ್ತಿಕ್,ಅಶೋಕ್,ರವೀಂದ್ರ,ಪುರಸಭಾ ಅಧ್ಯಕ್ಷ ಎನ್.ಸೋಮು,ಸದಸ್ಯರಾದ ಟಿ.ಎಂ.ನಂಜುಂಡಸ್ವಾಮಿ, ಮದನ್ ರಾಜ್,ಸೈಯದ್ ಅಹ್ಮದ್,ಬಿ.ಮರಯ್ಯ, ಹುಣಸೂರು ಬಸವಣ್ಣ,ಹೊಸಕೋಟೆ ಗ್ರಾ.ಪಂ.ಅಧ್ಯಕ್ಷ ಆನಂದ್ ಮತ್ತಿತರರಿದ್ದರು.

Related Keywords

Chetan , Rajasthan , India , Bangalore , Karnataka , Hampi , Syed Ahmed , Ishwar Karnataka , Madan Raj , Anil Kumar , Bangalore Jayanthi Program , , Chowdaiah Circle , Black Congress , President Anil Kumar , Bus Chetan , President Anand , சேதன் , ராஜஸ்தான் , இந்தியா , பெங்களூர் , கர்நாடகா , ஹம்பி , மதன் ராஜ் , அனில் குமார் , கருப்பு காங்கிரஸ் , ப்ரெஸிடெஂட் அனில் குமார் , ப்ரெஸிடெஂட் ஆனந்த் ,

© 2025 Vimarsana