ಕೇರಳ ಸೋಂಕ&#x

ಕೇರಳ ಸೋಂಕು ಕರ್ನಾಟಕಕ್ಕೆ ಕಂಟಕ - Sanjevani


Sanjevani
ಬೆಂಗಳೂರು,/ ನವದೆಹಲಿ .ಜು.೩೦- ಕೇರಳದಲ್ಲಿ ಕಳೆದ ಹಲವು ವಾರಗಳಿಂದ ನಿರಂತರವಾಗಿ ಹೆಚ್ಚುತ್ತಿರುವ ಕೊರೊನಾ ಸೋಂಕು ಸಂಖ್ಯೆ ಇದೀಗ ನೆರೆಯ ರಾಜ್ಯಗಳಾದ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ
ಹೀಗಾಗಿ ಕರ್ನಾಟಕಕ್ಕೆ ಹೊಂದಿಕೊಂಡಂತಿರುವ ಗಡಿ ಭಾಗಗಳ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ರಾಜ್ಯ ಸರ್ಕಾರ ಸಂಬಂಧಿಸಿದ ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಕೇರಳ ಗಡಿಗೆ ಹೊಂದಿಕೊಂಡಂತಿರುವ ಮಡಿಕೇರಿ ಮೈಸೂರು ಭಾಗದಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.ಜೊತೆಗೆ ಆ ರಾಜ್ಯದಿಂದ ಬರುವವರನ್ನು ತಪಾಸಣೆ ಮಾಡಿ ಒಳಬಿಡಲಾಗುತ್ತಿದೆ ಜೊತೆಗೆ ಕೋವಿಡ್ ಪರೀಕ್ಷೆ ಯ ನೆಗೆಟೀವ್ ವರದಿ ಕಡ್ಡಾಯವಾಗಿ ಪ್ರದರ್ಶಿಸುವಂತೆ ಸೂಚಿಸಲಾಗಿದೆ.
ಕರ್ನಾಟಕದಲ್ಲಿ ನೆನ್ನೆ ಒಂದೇ ದಿನ ಶೇಕಡ ೩೪ರಷ್ಟು ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಇದು ಸಹಜವಾಗಿ ರಾಜ್ಯ ಸರ್ಕಾರವನ್ನು ಆತಂಕಕ್ಕೆ ಸಿಲುಕುವಂತೆ ಮಾಡಿದೆ
ಕೇರಳದಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಸೋಂಕು ಹೆಚ್ಚಳವಾಗುತ್ತಿದೆ ನೆನ್ನೆ ಮೊನ್ನೆ ಪ್ರತಿನಿತ್ಯ ೨೨ ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ ಇದು ಸಹಜವಾಗಿ ಕೇರಳ ಸರ್ಕಾರವಲ್ಲದೆ ಕರ್ನಾಟಕ ತಮಿಳುನಾಡು ಹಾಗೂ ಕೇಂದ್ರ ಸರ್ಕಾರವನ್ನು ಆತಂಕಕ್ಕೆ ಸಿಲುಕುವಂತೆ ಮಾಡಿದೆ. ಕರ್ನಾಟಕ ತಮಿಳುನಾಡಿನಲ್ಲಿ ಇತ್ತೀಚಿನ ದಿನಗಳಲ್ಲಿ ಸೋಂಕು ಸಂಖ್ಯೆ ಕಡಿಮೆಯಾಗುತ್ತಿತ್ತು ಇದೀಗ ಮತ್ತೆ ಏರಿಕೆಯಾಗುತ್ತಿದೆ ಹೀಗಾಗಿ ಜನರು ಮತ್ತು ಸರಕಾರವನ್ನು ಮತ್ತೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ದೇಶದಲ್ಲಿ ಕಳೆದ ಇಪ್ಪತ್ತೆರಡು ದಿನಗಳ ನಂತರ ಸರಿ ಸುಮಾರು ೪೫೦೦೦ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಇದು ಎರಡನೇ ಅಲೆಯ ಸೋಂಕು ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆ ನೀಡಿದೆ.
ಕೇಂದ್ರ ತಂಡ ಆಗಮನ:
ಕೇರಳದಲ್ಲಿ ನಿತ್ಯ ಸೋಂಕು ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆರು ಸದಸ್ಯರ ಉನ್ನತಮಟ್ಟದ ತಜ್ಞರನ್ನು ಕಳುಹಿಸಿಕೊಟ್ಟಿದೆ.
ಈ ತಜ್ಞರ ತಂಡ ಕೇರಳದಲ್ಲಿ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ರಾಜ್ ಸರ್ಕಾರಕ್ಕೆ ಸಲಹೆ ನೀಡಲಿದೆ
ಶೇಕಡ ೧೨.೯೩ರಷ್ಟು ಪಾಸಿಟಿವಿಟಿ ಪ್ರಮಾಣ:
ಕೇರಳದ ೬ ಜಿಲ್ಲೆಗಳಲ್ಲಿ ಶೇಕಡ ೧೨.೯೩ ಪಾಸಿಟಿವಿಟಿ ಪ್ರಮಾಣ ಇರುವುದು ಸಹಜವಾಗಿಯೇ ಕೇರಳ ಸರ್ಕಾರವನ್ನು ಆತಂಕಕ್ಕೆ ಸಿಲುಕುವಂತೆ ಮಾಡಿದೆ.
ಇನ್ನುಳಿದಂತೆ ಶೇ.೧೦ಕ್ಕೂ ಹೆಚ್ಚಿನ ಪಾಸಿಟಿವಿಟಿ ಪ್ರಮಾಣ ಇದೆ.ಈ ಹಿನ್ನೆಲೆಯಲ್ಲಿ ಸೋಂಕು ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಕೇರಳ ಸರ್ಕಾರ ಮುಂದಾಗಿದೆ

Related Keywords

Bangalore , Karnataka , India , Kerala , Madikeri , New Delhi , Delhi , Tamil Nadu , States Karnataka , , Madikeri Mysore , Kerala Karnataka Tamil Nadu , Karnataka Tamil Nadu , பெங்களூர் , கர்நாடகா , இந்தியா , கேரள , மடிகேரி , புதியது டெல்ஹி , டெல்ஹி , தமிழ் நாடு , மாநிலங்களில் கர்நாடகா , கேரள கர்நாடகா தமிழ் நாடு , கர்நாடகா தமிழ் நாடு ,

© 2025 Vimarsana