ಕಾರ್ಮಿಕರ

ಕಾರ್ಮಿಕರಿಗೆ ಕೋವಿಡ ಪರಿಹಾರ ಕುರಿತು ಮಾಹಿತಿ ಪ್ರಚಾರ ಅಭಿಯಾನ


Sanjevani
ಬೀದರ:ಜೂ.16: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ನೀಡುತ್ತಿರುವ ಕೋವಿಡ್ ಪರಿಹಾರ ಧನದ ಬಗ್ಗೆ ಕರ್ನಾಟಕ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಮಾಹಿತಿ ನೀಡಿದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರವು ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅಸಂಘಟಿತ ಕಾರ್ಮಿಕರು, ಕೂಲಿಕಾರರು, ನೇಕಾರರು, ಕ್ಷೌರಿಕರು ಹೀಗೆ ಅನೇಕ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ 2000/- ರೂ ಹಾಗೂ ಕಟ್ಟಡ ಕಾಮಗಾರಿ ಕಾರ್ಮಿಕರಿಗೆ (ಲೇಬರ್ ಕಾರ್ಡ್) ಹೊಂದಿದವರಿಗೆ 3000/- ಸಹಾಯ ಧನ ನೀಡುತ್ತಿದೆ ಎಂದರು.
ಈ ಯೋಜನೆಯ ರಾಜ್ಯದ ಪ್ರತಿ ಕಾರ್ಮಿಕರಿಗೆ ನೆರವು ನೀಡಿದೆ ಆದಷ್ಟು ಹೆಚ್ಚಿನ ಕಾರ್ಮಿಕರಿಗೆ ಇದರ ಬಗ್ಗೆ ಮಾಹಿತಿ ನೀಡುವ ಮೂಲಕ ಅವರಿಗೆ ಸಹಾಯಧನ ಪಡೆಯಲು ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕೃ.ಉ.ಮಾ.ಸಮಿತಿ ಅಧ್ಯಕ್ಷ ವಿಜಯ್ ಕುಮಾರ್ ಆನಂದೆ, ಉಪಾಧ್ಯಕ್ಷ ಬಸವರಾಜ ಶರ್ಮಾ, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ್ ಕುಮಾರ್, ಹಾಗೂ ಎಪಿಎಂಸಿ ಎಲ್ಲಾ ನಿರ್ದೇಶಕರು, ಭಾಜಪ ಬೀದರ್ ದಕ್ಷಿಣ ಮಂಡಲ ಅಧ್ಯಕ್ಷ ರಾಜರೆಡ್ಡಿ ಶಹಾಬಾದ್, ಜಗನ್ನಾಥ ಪಾಟೀಲ್, ಸೇರಿದಂತೆ ಇತರೆ ಪ್ರಮುಖರು ಉಪಸ್ಥಿತರಿದ್ದರು

Related Keywords

Karnataka , India , Vishal Sharma , Jagannath Patil , Ramesh Kumar , Vijay Kumar , Market Committee Office , Karnataka Industry , President Vijay Kumar , Vice President Vishal Sharma , District Labor , Shri Bidar South , கர்நாடகா , இந்தியா , விஷால் ஷர்மா , ஜெகந்நாத் பாட்டீல் , ரமேஷ் குமார் , விஜய் குமார் , சந்தை குழு அலுவலகம் ,

© 2025 Vimarsana