ನೂತನ ಶಿಕ್&#x

ನೂತನ ಶಿಕ್ಷಣ ನೀತಿ ಸಾಕಾರಕ್ಕೆ ಪೂರಕ


Sanjevani
ನವದೆಹಲಿ,ಜು.೩೦- ಪ್ರಾದೇಶಿಕ ಭಾಷೆಗಳಲ್ಲಿ ತಂತ್ರಜ್ಞಾನ ಶಿಕ್ಷಣ ನೀಡುವ ವ್ಯವಸ್ಥೆಯುಳ್ಳ ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಯುವಜನರ ಕನಸುಗಳ ಸಾಕಾರಕ್ಕೆ ಪೂರಕವಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ತಿಳಿಸಿದ್ದಾರೆ.
ದೇಶದ ಕೊಟ್ಯಂತರ ಯುವಜನರ ಕನಸುಗಳ ಸಾಕಾರಕ್ಕೆ ಎನ್‌ಇಪಿ ಹೆಚ್ಚು ಸಹಕಾರಿ ಎಂದು ನೂತನ ಶಿಕ್ಷಣ ನೀತಿಯ ಪ್ರಥಮ ವರ್ಷಾಚರಣೆ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಇಂದು ದೇಶದ ಶೈಕ್ಷಣಿಕ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಕೊರೊನಾ ನಡುವೆಯೂ ಶಿಕ್ಷಣ ವ್ಯವಸ್ಥೆಗೆ ದೇಶದಲ್ಲಿ ಅಡಚಣೆಯುಂಟಾಗಿಲ್ಲ. ಆನ್‌ಲೈನ್ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ವ್ಯವಸ್ಥೆ ಕಾಪಾಡಿಕೊಳ್ಳಲಾಗಿದೆ ಎಂದ ಅವರು, ಕೋವಿಡ್‌ನಿಂದ ಶೈಕ್ಷಣಿಕ ಕ್ಷೇತ್ರ ವ್ಯವಸ್ಥೆಗೆ ಧಕ್ಕೆಯುಂಟಾಗಿದ್ದರೂ ಬೋಧಕರು ಮತ್ತು ವಿದ್ಯಾರ್ಥಿಗಳು ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಶೈಕ್ಷಣಿಕ ಸಕ್ರಿಯತೆಯನ್ನು ಕಾಪಾಡಿಕೊಂಡಿದ್ದಾರೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಭಾರತದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳುತ್ತಿದ್ದರು. ಆದರೆ, ನೂತನ ಶಿಕ್ಷಣ ನೀತಿ ವಿದ್ಯಾರ್ಥಿಗಳಿಗೆ ಒತ್ತಡಮುಕ್ತ ವಾತಾವರಣ ನಿರ್ಮಾಣ ಮಾಡಿದೆ.
ಎಲ್‌ಇಪಿ ಅಡಿಯಲ್ಲಿ ಭಾರತದಲ್ಲಿ ಜಾಗತಿಕ ಗುಣಮಟ್ಟ ಶಿಕ್ಷಣವನ್ನು ಒದಗಿಸಲಾಗುವುದು ಹಾಗೂ ಕೋರ್ಸ್‌ಗಳ ಆಯ್ಕೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ ಎಂದ ಅವರು, ಮಾತೃ ಭಾಷೆಯಲ್ಲೇ ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯಗಳ ಶಿಕ್ಷಣವನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ಇಂಜಿನಿಯರಿಂಗ್ ೧೧ ಭಾಷೆಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ತಂತ್ರಜ್ಞಾನ ಪಠ್ಯಕ್ರಮ ಆಯಾ ಪ್ರಾದೇಶಿಕ ಭಾಷೆಗಳಲ್ಲಿಯೇ ದೊರೆಯಲಿದೆ. ೮ ರಾಜ್ಯಗಳ ೧೪ ಇಂಜಿನಿಯರಿಂಗ್ ಕಾಲೇಜುಗಳು ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಆರಂಭಿಸಿವೆ ಎಂದು ಮೋದಿ ತಿಳಿಸಿದರು.
ಪ್ರಾದೇಶಿಕ ಭಾಷೆಗಳಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ಕೋರ್ಸ್‌ಗೆ ಚಾಲನೆ ನೀಡಿದ ಅವರು, ಉನ್ನತ ಶಿಕ್ಷಣದಲ್ಲಿ ವಿವಿಧ ವಿಷಯಗಳ ಕಲಿಕೆಗೆ ಪ್ರವೇಶ ಮತ್ತು ನಿರ್ಗಮನ ಆಯ್ಕೆ ಯೋಜನೆಯನ್ನು ಇಂದು ಉದ್ಘಾಟಿಸಿದರು ಹಾಗೂ ಉನ್ನತ ಶಿಕ್ಷಣ ಅಂತರಾಷ್ಟ್ರೀಯಗೊಳಿಸುವ ಮಾರ್ಗಸೂಚಿಗಳನ್ನು ಅವರು ಬಿಡುಗಡೆ ಮಾಡಿದರು.
ಶಿಕ್ಷಕರಿಗೆ ತರಬೇತಿ ನೀಡುವ ನಿಷ್ಠ ೨.೦ ಸೇರಿದಂತೆ ವಿವಿಧ ಶೈಕ್ಷಣಿಕ ಯೋಜನೆಗಳಿಗೂ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ಎನ್‌ಇಪಿ ತಂತ್ರಜ್ಞಾನ ಶಿಕ್ಷಣಕ್ಕೆ ಪೂರಕ
ಇಂದು ಎನ್‌ಇಪಿ ಪ್ರಥಮ ವರ್ಷಾಚರಣೆ
ಜಾಗತಿಕ ಗುಣಮಟ್ಟದ ಶಿಕ್ಷಣ ಲಭ್ಯ
೮ ರಾಜ್ಯಗಳ ೧೪ ಇಂಜಿನಿಯರಿಂಗ್ ಕಾಲೇಜುಗಳಲ್ಲಿ
ಪ್ರಾದೇಶಿಕ ಭಾಷೆಗಳಲ್ಲಿ ತಂತ್ರಜ್ಞಾನ ಶಿಕ್ಷಣ
೧೧ ಭಾಷೆಗಳಲ್ಲಿ ಇಂಜಿನಿಯರಿಂಗ್ ಕೋರ್ಸ್ ಪಠ್ಯಕ್ರಮ

Related Keywords

India , New Delhi , Delhi , Narendra Modi , , New Education , Prime Minister Narendra Modi Monday , Prime Minister Narendra Modi , Academic Field , Prime Minister Monday , இந்தியா , புதியது டெல்ஹி , டெல்ஹி , நரேந்திர மோடி , புதியது கல்வி , ப்ரைம் அமைச்சர் நரேந்திர மோடி திங்கட்கிழமை , ப்ரைம் அமைச்சர் நரேந்திர மோடி , ப்ரைம் அமைச்சர் திங்கட்கிழமை ,

© 2025 Vimarsana