ನೆರೆ ಪರಿಹ&#x

ನೆರೆ ಪರಿಹಾರಕ್ಕೆ ಎನ್‌ಡಿಆರ್‌ಎಫ್ ಹಣ ಬಳಕೆ ಬಗ್ಗೆ ಪತ್ರ


Sanjevani
??????
ದೇವದುರ್ಗ.ಆ.೦೪- ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ೪.೨೦ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿದ್ದು, ತಾಲೂಕು ಆಡಳಿತ ನೆರೆ ಎದುರಿಸಲು ಸನ್ನದ್ಧವಾಗಿದ್ದು, ನದಿದಂಡೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಬಾರದು. ದಿನದ ೨೪ಗಂಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಪ್ರಭಾರ ತಹಸೀಲ್ದಾರ್ ಶ್ರೀನಿವಾಸ್ ಚಾಪಲ್ ಹೇಳಿದರು.
ಪಟ್ಟಣದ ಮಿನಿವಿಧಾನಸೌಧದಲ್ಲಿ ಪ್ರಭಾರರಾಗಿ ಅಧಿಕಾರ ಸ್ವೀಕರಿಸಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದರು. ನದಿಗೆ ೪.೫ಲಕ್ಷ ಕ್ಯೂಸೆಕ್ ನೀರು ಹರಿಸಿದರೆ, ಅಂಜಳ, ಲಿಂಗದಹಳ್ಳಿ, ಹಿರೇರಾಯಕುಂಪಿ ಗ್ರಾಮಗಳ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ. ಮುಂಜಾಗ್ರತೆ ಕ್ರಮವಾಗಿ ಅಂಜಳ ಗ್ರಾಮದ ಮೂರು ಕುಟುಂಬಗಳನ್ನು ಅದೇ ಗ್ರಾಮದ ಅವರ ಸಂಬಂಧಿಕರ ಮನೆಗಳಿಗೆ ಶಿಫ್ಟ್ ಮಾಡಲಾಗಿದೆ.
೧೨ಕುಟುಂಬಗಳಿಗೆ ಹೈಅಲರ್ಟ್ ಆಗಿರಲು ಸೂಚಿಸಿದ್ದು, ಅಧಿಕಾರಿಗಳು ನಿಗಾವಹಿಸಲಾಗುತ್ತಿದೆ. ಲಿಂಗದಹಳ್ಳಿ ಗ್ರಾಮದಲ್ಲಿ ವಾಸವಿರುವ ೮ಆಂಧ್ರ ಕುಟುಂಬದ ೨೨ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಅವರಿಗೆ ವಸತಿ, ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಹಿರೇರಾಯಕುಂಪಿ ಮುಖ್ಯರಸ್ತೆವರೆಗೆ ನೀರು ಬಂದಿವೆ. ಅಲ್ಲಿ ಯಾವುದೇ ಆತಂಕವಿಲ್ಲ. ೪.೫ಲಕ್ಷ ಕ್ಯೂಸೆಕ್‌ಗೆ ನೀರು ಹೆಚ್ಚಾದರೆ, ೧೩ಮನೆ ಸ್ಥಳಾಂತರಿಸಲಾಗುವುದು.
ಕೊಪ್ಪರದ ಶ್ರೀಲಕ್ಷ್ಮಿನರಸಿಂಹ ದೇವಸ್ಥಾನ, ಗೂಗಲ್ ಶ್ರೀಅಲ್ಲಮಪ್ರಭು ದೇವಸ್ಥಾನ ಜಲಾವೃತವಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಮುಂಜಾಗ್ರತೆ ಕ್ರಮಕೈಗೊಳ್ಳಲಾಗಿದೆ. ನದಿಗೆ ಇಳಿಯದಂತೆ ಗ್ರಾಮಸ್ಥರಿಗೆ ಡಂಗೂರ ಸಾರಿ ಎಚ್ಚರಿಕೆ ನೀಡಿದ್ದು, ದಿನದ ೨೪ಗಂಟೆ ಪೊಲೀಸರ ನಿಯೋಜಿಸಲಾಗಿದೆ ಎಂದು ಹೇಳಿದರು.
ಕೋಟ್====
ವೀರಗೋಟ, ನೀಲವಂಜಿ, ಕೊಪ್ಪರ ಸೇರಿ ನದಿದಂಡೆ ಗ್ರಾಮಗಳ ರೈತರ ಜಮೀನಿಗೆ ನೀರು ನುಗ್ಗಿವೆ. ನೆರೆ ಇಳಿದ ನಂತರ ಕಂದಾಯ, ಕೃಷಿ ಇಲಾಖೆಯಿಂದ ಸಮೀಕ್ಷೆ ನಡೆಸಲಾಗುವುದು. ಅಂಜಳ, ಹಿರೇರಾಯಕುಂಪಿ, ಲಿಂಗದಹಳ್ಳಿಯಲ್ಲಿ ನಿರಾಶ್ರೀತರ ಕೇಂದ್ರ ತೆರೆಯುವ ಯೋಚನೆಯಿದೆ. ನೆರೆ ಪರಿಹಾರಕ್ಕೆ ಎನ್‌ಡಿಆರ್‌ಎಫ್ ಹಣ ಬಳಕೆ ಮಾಡುವ ಬಗ್ಗೆ ಸಹಾಯಕ ಆಯುಕ್ತರಿಗೆ ಪತ್ರ ಬರೆಯಲಾಗಿದೆ.
| ಶ್ರೀನಿವಾಸ್ ಚಾಪಲ್
ಪ್ರಭಾರ ತಹಸೀಲ್ದಾರ್

Related Keywords

Sriharikota , Andhra Pradesh , India , Srinivas Tehsildar , Google Temple , Tehsildar Srinivas , , Monday Saturday , Real Estate , ஸ்ரீஹரிகோட்டா , ஆந்திரா பிரதேஷ் , இந்தியா , திங்கட்கிழமை சனிக்கிழமை , ரியல் எஸ்டேட் ,

© 2025 Vimarsana