ಯುಜಿಸಿ ನಿ&#x

ಯುಜಿಸಿ ನಿಯಮ ಪಾಲಿಸಲು ಕವಿವಿಗೆ ಎಸ್‍ಎಫ್‍ಐ ಆಗ್ರಹ


Sanjevani
ಧಾರವಾಡ,ಜು30: ನಗರದ ಕರ್ನಾಟಕ ವಿಶ್ವವಿದ್ಯಾಲಯದ ಮುಂದೆ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಎಸ್‍ಎಫ್‍ಐ ಸೌಹಾರ್ದ ಬೆಂಬಲ ನೀಡಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ನಿಯೋಗವು ಕುಲಪತಿಗಳಾದ ಪೆÇ್ರ.ಕೆ.ಬಿ.ಗುಡಸಿ ಅವರಿಗೆ ಮನವಿ ಸಲ್ಲಿಸಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಅಂತಿಮ ಸೆಮಿಸ್ಟರ್ಗಳ ಪರೀಕ್ಷೆಗೆ ಮಾತ್ರ ಯುಜಿಸಿ ಆದೇಶ ಹೊರಡಿಸಿದೆ ಆದರಿಂದ ಯುಜಿಸಿ ನಿಯಮ ಪಾಲಿಸಲು ಎಸ್‍ಎಫ್‍ಐ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಎಸ್‍ಎಫ್‍ಐ ರಾಜ್ಯ ಸಮಿತಿ ಸದಸ್ಯರಾದ ಗಣೇಶ ರಾಠೋಡ ಮಾತಾನಾಡಿ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 2020-21ನೇ ಸಾಲಿನ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ‘ವರ್ಷಾಂತ್ಯದ ಸೆಮಿಸ್ಟರ್ ಅಥವಾ ಅಂತಿಮ ಸೆಮಿಸ್ಟರ್’ಗೆ ಮಾತ್ರ ‘ಆಫ್ಲೈನ್ ಅಥವಾ ಆನ್ಲೈನ್ ಪರೀಕ್ಷೆ ನಡೆಸುವಂತೆ ವಿಶ್ವವಿದ್ಯಾಲಯದ ಧನಸಹಾಯ ಆಯೋಗ (ಯುಜಿಸಿ)ವು ದಿ 16 ರಂದು ಆದೇಶ ಹೊರಡಿಸಿದೆ. ಕೋವಿಡ್-19ನಿಂದಾಗಿ ಮುಂದೂಡಲ್ಪಟ್ಟಿದ್ದ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವಂತಿಲ್ಲ. ಬದಲಿಗೆ, ಹಿಂದಿನ ಸೆಮಿಸ್ಟರ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದಲ್ಲಿ ಆಥವಾ ಆಂತರಿಕ ಮೌಲ್ಯಮಾಪನದ ಮೂಲಕ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿದೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಬೇಕಿದ್ದ 2020-21ನೇ ಸಾಲಿನ ಎಲ್ಲಾ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ಗಳ 1, 3, 5 ಹಾಗೂ 7ನೇ ಸೆಮಿಸ್ಟರ್ ಪರೀಕ್ಷೆಗಳನ್ನು ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಕೊವಿಡ್ -19ರ ಲಾಕ್ ಡೌನ್ ಕಾರಣ ಮುಂದೂಡಿದ್ದವು. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ 2, 4, 6 ಹಾಗೂ 8ನೇ ಸೆಮಿಸ್ಟರ್ ತರಗತಿಗಳನ್ನು ಆನ್ಲೈನ್ ನಲ್ಲಿ ಪ್ರಾರಂಭಿಸಿ, ಜುಲೈ ಅಂತ್ಯದ ವೇಳೆಗೆ ಎರಡು ಸೆಮಿಸ್ಟರ್ ಗಳ ಪರೀಕ್ಷೆಗಳನ್ನು ನಡೆಸಲು ಮುಂದಾಗಿದವು. ವಿಶ್ವವಿದ್ಯಾಲಯಗಳ ಈ ಕ್ರಮಕ್ಕೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ)ಸಂಘಟನೆಯು ರಾಜ್ಯಾದ್ಯಂತ ಪ್ರತಿಭಟನೆ ಮಾಡಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಕೇವಲ ವರ್ಷಾಂತ್ಯದ ಅಂದರೆ, 2, 4, 6 ಹಾಗೂ 8ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವಂತೆ ಸೂಚಿಸಿರುವ ಯುಜಿಸಿ, 1, 3, 5, 7ನೇ ಸೆಮಿಸ್ಟರ್ಗೆ ಆಂತರಿಕ ಮೌಲ್ಯಮಾಪನದ ಮೂಲಕ ಫಲಿತಾಂಶ ಪ್ರಕಟಿಸುವಂತೆ ಆದೇಶಿಸಿರುವ ಯುಜಿಸಿ ಯ ನಿಯಮಗಳನ್ನು ಪಾಲಿಸಲು ಭಾರತ ವಿದ್ಯಾರ್ಥಿ ಫೆಡರೇಶನ್(SಈI)ಸಂಘಟನೆಯು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಒತ್ತಾಯಿಸುತ್ತದೆ.
ಎಸ್‍ಎಫ್‍ಐ ನಿಯೋಗದಲ್ಲಿ ಬಸವರಾಜ ಬೋವಿ,ಪರಶುರಾಮ ಮಳ್ಳಿ, ನಾಗರಾಜ್ ಸಿ.ಐ, ಲಕ್ಷ್ಮಣ ಎಂ, ಅಬ್ದುಲ್, ಸುನೀಲ್, ಸೇರಿದಂತೆ ಭಾಗವಹಿಸಿದರು.

Related Keywords

Dharwad , Karnataka , India , , Friendly , Mission Vishal , Karnataka University , University Commission , Monday Law , State Committee , May , தர்வாத் , கர்நாடகா , இந்தியா , நட்பாக , கர்நாடகா பல்கலைக்கழகம் , பல்கலைக்கழகம் தரகு , திங்கட்கிழமை சட்டம் , நிலை குழு , இருக்கலாம் ,

© 2025 Vimarsana