"ವರದ" ನಾದ ವಿ

"ವರದ" ನಾದ ವಿನೋದ್ - Sanjevani


Sanjevani
ತಂದೆ ಮಗನ‌ ಬಾಂಧವ್ಯದ ಕಥಾ ಹಂದರ ಹೊಂದಿರುವ ” ವರದ” ಚಿತ್ರೀಕರಣ ಪೂರೈಸಿ ಬಿಡುಗಡೆಗೆ ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಚಿತ್ರ ಬಿಡುಗಡೆಯಾಗಬೇಕಾಗಿತ್ತು.
ವರದನಾಗಿ‌ ವಿನೋದ್ ಪ್ರಭಾಕರ್ ಮತ್ತು ತಂದೆಯ ಪಾತ್ರದಲ್ಲಿ ಹಿರಿಯ ನಟ ಚರಣ್ ರಾಜ್ ನಟಿಸಿದ್ದಾರೆ.
“ವರದ” ನ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವೇಳೆ ಮಾತಿಗಿಳಿದ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಉದಯ ಪ್ರಕಾಶ್, ಚಿತ್ರ ಎರಡು ವರ್ಷಗಳ ಹಿಂದೆ ಆರಂಭವಾಯಿತು. ಕೊರೋನಾ ಸೋಂಕಿನಿಂದ ತಡವಾಯಿತು ಚಿತ್ರೀಕರಣ ಪೂರ್ಣವಾಗಿದ್ದು,ಚಿತ್ರೀಕರಣದ ನಂತರದ ಕೆಲಸ ನಡೆಯುತ್ತಿದೆ ಎಂದರು
ಚಿತ್ರದ ಮೋಷನ್ ಪೋಸ್ಟರ್ ನಲ್ಲಿ ಬರುವ ಮೂರು ಸಂಭಾಷಣೆಗಳೇ ಚಿತ್ರದ ಕಥಾವಸ್ತು. ಚಿತ್ರ ಉತ್ತಮವಾಗಿ ಮೂಡಿಬರುತ್ತಿರುವುದಕ್ಕೆ ಚಿತ್ರತಂಡದ ಸಹಕಾರ ನೀಡಿದೆ. ನಾಯಕ ವಿನೋದ್ ಪ್ರಭಾಕರ್ ಚಿತ್ರದಲ್ಲಿ ತೊಡಗಿಸಿಕೊಳ್ಳುವ ರೀತಿ ಅದ್ಭುತ. ಎಲ್ಲದಕ್ಕೂ ಮಿಗಿಲಾಗಿ ಚಿತ್ರ ಆರಂಭಿಸುವಾಗ ನನ್ನ ಬಳಿ ಕೇವಲ ಒಂದು ಲಕ್ಷ ರೂಪಾಯಿತ್ತು.. ಆ ಸಮಯದಲ್ಲಿ ನನಗೆ ಉತ್ತೇಜನ ನೀಡಿ ಚಿತ್ರ ನಿರ್ಮಾಣ ಮಾಡುವಂತೆ ಪ್ರೇರೇಪಿಸಿದ ಮಡದಿ ಸುನಿತಾಗೆ ವಿಶೇಷ ಧನ್ಯವಾದ ಎಂದರು.
ನಟ ವಿನೋದ್ ಮಾತನಾಡಿ,ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಅಭಿನಯ ಉತ್ತಮವಾಗಿದೆ. ತಾಂತ್ರಿಕವರ್ಗದವರ ಸಹಕಾರದಿಂದ ಚಿತ್ರ ಸುಂದರವಾಗಿ ಮೂಡಿಬರಲು ಹೆಚ್ಚು ಸಹಕಾರಿಯಾಗಿದೆ ಚಿತ್ರದ ಟೀಸರ್, ಟ್ರೇಲರ್ ಬಿಡುಗಡೆಯಾಗಲಿದೆ ಆಗ ಸಾಕಷ್ಟು ಮಾಹಿತಿ ನೀಡುತ್ತೇನೆ ಎಂದರು.
ಹಿರಿಯ ನಟ ಚರಣ್ ರಾಜ್, ಹಿಂದೆ ಪ್ರಭಾಕರ್ ಅವರೊಂದಿಗೆ ನಟಿಸಿದ್ದ ಅನುಭವಗಳನ್ನು ಹಂಚಿಕೊಂಡರು. ತಂದೆಯಂತೆ ಮಗ ವಿನೋದ್ ಕೂಡ ಸ್ನೇಹಜೀವಿ, ಅವರಿಗೆ ಉತ್ತಮ ಭವಿಷ್ಯವಿದೆ ಎಂದರು. ನಿರ್ದೇಶಕ ಉದಯ ಪ್ರಕಾಶ್ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎ.ಕೆ ಮಠ,ವರ್ಧನ್ ತೀರ್ಥಹಳ್ಳಿ, ಅಶ್ವಿನಿ ಗೌಡ ಮತ್ತಿತರರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಚಿತ್ರಕ್ಕೆ ಪ್ರದೀಪ್ ವರ್ಮ ಸಂಗೀತ ನೀಡಿದ್ದು ಛಾಯಾಗ್ರಾಹಕ ಜೈಆನಂದ್ ಛಾಯಾಗ್ರಹಣದ‌ ಜವಬ್ದಾರಿ ಹೊತ್ತಿದ್ದಾರೆ

Related Keywords

Vinod Prabhakar , Ashwini Karnataka , , வினோத் ப்ர்யாப்‌ஹகர் ,

© 2025 Vimarsana