ವಿಟ್ಲದಲ್

ವಿಟ್ಲದಲ್ಲಿ ರೂ.೧೪೦ ಕೋಟಿ ವೆಚ್ಚದ 'ಜಲಧಾರೆ'


Sanjevani
smart
ಪುತ್ತೂರು, ಆ.೩- ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಹಿನ್ನಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬಂಟ್ವಾಳ ತಾಲೂಕಿನ ವಿಟ್ಲ ಪ್ರದೇಶದಲ್ಲಿ ರೂ. ೧೪೦ ಕೋಟಿ ರೂ.ಗಳ ಜಲಧಾರೆ ಯೋಜನೆಗೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಗೊಂಡಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟ್ವಾಳ ತಾಲೂಕಿನ ಕಡೇಶಿವಾಲಯ ಸಮೀಪದ ನೇತ್ರಾವತಿ ಡ್ಯಾಮ್‌ನಿಂದ ನೀರೆತ್ತಿ ವಿಟ್ಲ, ಪೆರುವಾಯಿ, ಮಾಣಿಲ ಸೇರಿದಂತೆ ಆ ಭಾಗದ ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ. ಅಣೆಕಟ್ಟು ಇರುವ ಪ್ರದೇಶಕ್ಕೆ ಮಾತ್ರ ಈ ಯೋಜನೆ ಮಂಜೂರಾಗುತ್ತದೆ. ಪುತ್ತೂರು ಭಾಗದ ಕಟಾರದಲ್ಲಿ ಅಣೆಕಟ್ಟು ನಿರ್ಮಿಸುವ ಯೋಜನೆ ಇದೆ. ಶಾಂತಿಗೋಡು ಸಮೀಪ ಪ್ರಗತಿಯಲ್ಲಿದೆ ಎಂದರು.
ಪುತ್ತೂರು ಕ್ಷೇತ್ರಕ್ಕೆ ೯೨.೧೧ ಕೊ. ರೂ. ಅನುದಾನ ಮಂಜೂರಾಗಿದೆ. ಮೇಲ್ದರ್ಜೆಗೇರಿದ ೧೬೭ ಕಿ.ಮೀ. ರಸ್ತೆಗಳ ಅಗಲೀಕರಣ, ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಮೂಲಕ ೪೦ ಕೋ. ರೂ. ಅನುದಾನಕ್ಕೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿದೆ. ಕಿಂಡಿ ಅಣೆಕಟ್ಟು, ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ ೫೦ ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ೪೦ ಕೋಟಿಗೆ ಅನುಮೋದನೆ ಸಿಕ್ಕಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್‌ಎಚ್‌ಡಿಪಿ)ಯಲ್ಲಿ ೨೫ ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಆಶ್ರಯ ಯೋಜನೆಗೆ ಮರು ಚಾಲನೆ ನೀಡಲಾಗಿದ್ದು, ರಾಜ್ಯದಲ್ಲಿ ೫ ಲಕ್ಷ ಮನೆ ನಿರ್ಮಾಣವಾಗಲಿದೆ. ಪುತ್ತೂರಿಗೆ ೧೨೬೦ ಮನೆ ಮಂಜೂರಾಗಿದ್ದು, ಪ್ರತೀ ಗ್ರಾಪಂನಲ್ಲಿ ೩೫ ಮನೆ ನಿರ್ಮಾಣವಾಗಲಿದೆ. ೨೦೨೧-೨೨ನೇ ಹಣಕಾಸು ವರ್ಷದಲ್ಲಿ ಇದುವರೆಗೆ ಪುತ್ತೂರು ಕ್ಷೇತ್ರಕ್ಕೆ ೯೨.à³§à³§ ಕೋಟಿ ರೂ. ಮಂಜೂರಾಗಿದೆ. ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿಯಲ್ಲಿ ರಸ್ತೆ, ಸೇತುವೆಗಳ ಅಭಿವೃದ್ಧಿಗೆ à³§à³® ಕೋಟಿ, ನಮ್ಮ ಗ್ರಾಮ – ನಮ್ಮ ರಸ್ತೆಯ ಪ.ಜಾತಿ-ಪ.ಪಂಗಡ ಯೋಜನೆಯಲ್ಲಿ ೧೨ ಕಿ.ಮೀ. ರಸ್ತೆಗೆ ೧೦ ಕೋಟಿ, ಲೆಕ್ಕಶೀರ್ಷಿಕೆ ೩೦೫೪ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ à³§.೪೬ ಕೋಟಿ, ಲೋಕೋಪಯೋಗಿ ಇಲಾಖೆಯ ಗ್ರಾಮಬಂಧು ಯೋಜನೆಯಡಿ ಶಾಲಾ ಸಂಪರ್ಕ ಸೇತು ನಿರ್ಮಾಣಕ್ಕೆ ೩೧ ಕಾಮಗಾರಿಗೆ ೪ ಕೋಟಿ, ಮಳೆಹಾನಿ ಎಸ್‌ಡಿಆರ್‌ಎಫ್ ಅನುದಾನದಲ್ಲಿ ೨೦ ರಸ್ತೆಗಳ ಅಭಿವೃದ್ಧಿಗೆ à³§ ಕೋಟಿ, ೧೫ನೇ ಹಣಕಾಸು ಯೋಜನೆಯಲ್ಲಿ à³§,೫೪,೨೨,೦೦೦ ರೂ., ಜಿಪಂ ಅಭಿವೃದ್ಧಿ ಅನುದಾನದಡಿಯಲ್ಲಿ ೩,೦೩, à³­à³®,೦೦೦ ರೂ, ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ೫ ಕೋಟಿ, ಕೆಯ್ಯೂರು ಕೆಪಿಎಸ್ (ಶಾಲೆ) ಮೂಲ ಸೌಕರ್ಯ ಅಭಿವೃದ್ಧಿಗೆ ೨ ಕೋಟಿ, ಗಿರಿಜನ ಅಭಿವೃದ್ಧಿ ಯೋಜನೆ (ಐಟಿಡಿಪಿ)ಯಲ್ಲಿ ೨.೫೫ ಕೋಟಿ, ಪ್ರಗತಿ ಕಾಲೊನಿಯಲ್ಲಿ ೧೩ ರಸ್ತೆಗಳ ಕಾಮಗಾರಿಗೆ ೨.೬೦ ಕೋಟಿ, ಜಲಜೀವನ್ ಮಿಶನ್ – ೩ನೇ ಹಂತದಲ್ಲಿ ೪೦.೯೨ ಕೋಟಿ ರೂ. ಮಂಜೂರಾಗಿದೆ ಎಂದು ಶಾಸಕ ಮಠಂದೂರು ವಿವರಿಸಿದರು.
ಗೋಷ್ಠಿಯಲ್ಲಿ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ತಾಪಂ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪಕ್ಷದ ಪದಾಧಿಕಾರಿಗಳಾದ ನಿತೀಶ್ ಕುಮಾರ್ ಶಾಂತಿವನ, ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್. ಶೆಟ್ಟಿ ಉಪಸ್ಥಿತರಿದ್ದರು.

Related Keywords

Mangalore , Karnataka , India , Bihar Kumar , Mangalore Assembly Field , Development The Scheme , Zp Development , Department The Scheme School , Mangalore District , Mangalore Field , Building West Channel , Scheme School , President Radha , மங்களூர் , கர்நாடகா , இந்தியா , பிஹார் குமார் , மங்களூர் மாவட்டம் , ப்ரெஸிடெஂட் ராதா ,

© 2025 Vimarsana