ವಿವೇಕಾನಂ

ವಿವೇಕಾನಂದಲ್ಲಿ ಹೊಸ ಕೋರ್ಸ್- ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ


ವಿವೇಕಾನಂದಲ್ಲಿ ಹೊಸ ಕೋರ್ಸ್- ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ
ಪುತ್ತೂರು, ಜು.೨೦- ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಪ್ರವರ್ತಿತವಾಗಿರುವ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯು ೨೦ರ ಹರೆಯಕ್ಕೆ ದಾಪುಗಾಲಿಟ್ಟಿದ್ದು ಇದಕ್ಕೆ ಕಲಶಪ್ರಾಯವಾಗುವಂತೆ ತಾಂತ್ರಿಕ ಕ್ಷೇತ್ರದ ನೂತನ ತಂತ್ರಜ್ಞಾನವಾದ ಕಂಪ್ಯೂಟರ್ ಸೈನ್ಸ್ ಎಂಡ್ ಇಂಜಿನಿಯರಿಂಗ್ (ಡೇಟಾ ಸೈನ್ಸ್) ಸ್ನಾತಕ ವಿಭಾಗ ಮತ್ತು ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (ಎಂಸಿಎ) ಎನ್ನುವ ಸ್ನಾತಕೋತ್ತರ ವಿಭಾಗವನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರಾರಂಭಿಸುವುದಕ್ಕೆ ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಅನುಮತಿ ದೊರಕಿದೆ.
ಇದಲ್ಲದೆ ಕಂಪ್ಯೂಟರ್ ಸೈನ್ಸ್, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಶಿನ್ ಲರ್ನಿಂಗ್, ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್, ಸಿವಿಲ್ ಎಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಕೋರ್ಸುಗಳು ಮತ್ತು ಎಂಬಿಎ ಸ್ನಾತಕೋತ್ತರ ವಿಭಾಗಗಳಲ್ಲೂ ಅಧ್ಯಯನಕ್ಕೆ ಅವಕಾಶವಿದೆ.
ನೂತನವಾಗಿ ಪ್ರಾರಂಭಗೊಂಡ ಕಂಪ್ಯೂಟರ್ ಸೈನ್ಸ್ ಎಂಡ್ ಎಂಜಿನಿಯರಿಂಗ್(ಡೇಟಾ ಸೈನ್ಸ್) ವಿಭಾಗವು ಕಂಪ್ಯೂಟರ್ ಸೈನ್ಸ್ ವಿಭಾಗದಂತೆಯೇ ಇದ್ದು ದತ್ತಾಂಶಗಳ ಸಂಗ್ರಹ ಮತ್ತು ಅದರ ಪರಿಣಾಮಕಾರಿ ನಿರ್ವಹಣೆಯ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ಒದಗಿಸುತ್ತದೆ. ಸ್ನಾತಕೋತ್ತರ ವಿಭಾಗದಲ್ಲಿ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (ಎಂಸಿಎ) ಕೋರ್ಸನ್ನು ಪ್ರಾರಂಭಿಸಲಾಗಿದೆ. ಇದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟಿದ್ದು ಎರಡು ವರ್ಷಗಳ ಅವಧಿಯದ್ದಾಗಿರುತ್ತದೆ. ಬಿಸಿಎ ಮತ್ತು ಬಿಎಸ್ಸಿ(ಕಂಪ್ಯೂಟರ್ ಸೈನ್ಸ್) ಪದವಿಯನ್ನು ಪಡೆದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಇದು ಸಹಕಾರಿಯಾಗಿದೆ. ಈ ಕೋರ್ಸುಗಳಿಗೆ ವಿಶ್ವವಿದ್ಯಾನಿಲಯವು ನಿಗದಿಪಡಿಸಿದಂತೆ ನುರಿತ ಉಪನ್ಯಾಸಕ ವೃಂದವನ್ನು ನೇಮಕ ಮಾಡಲಾಗಿದೆ ಮತ್ತು ಸುಸಜ್ಜಿತ ಪ್ರಯೋಗಾಲಯಗಳನ್ನು ನಿರ್ಮಿಸಲಾಗಿದೆ.
ಕಾಲೇಜಿನ ತರಬೇತಿ ಮತ್ತು ನೇಮಕಾತಿ ವಿಭಾಗವು ಕ್ರಿಯಾಶೀಲವಾಗಿ ಕೆಲಸಮಾಡುತ್ತಿದ್ದು, ೮೩ ಕಂಪೆನಿಗಳು ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿವೆ. ಕೊರೋನಾ ಅನಿಶ್ಚಿತತೆಯ
ನಡುವೆಯೂ ಶೇ.೮೫ ವಿದ್ಯಾರ್ಥಿಗಳಿಗೆ ಕಾರ್ಪೋರೇಟ್ ಜಗತ್ತಿನ ವಿವಿಧ ಬಹುರಾಷ್ಟ್ರೀಯ/ರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗಾವಕಾಶ ದೊರಕಿದೆ.
ವಿದ್ಯಾರ್ಥಿಗಳನ್ನು ಕ್ಯಾಂಪಸ್ ನೇಮಕಾತಿಗೆ ತರಬೇತುಗೊಳಿಸುವ ನಿಟ್ಟಿನಲ್ಲಿ ಪ್ರಸಿದ್ಧ ತರಬೇತು ಸಂಸ್ಥೆಗಳಾದ ಕ್ಯೂ-ಸ್ಪೈಡರ್, ಜೆ-ಸ್ಪೈಡರ್ ಮತ್ತು ಎತ್ನಸ್ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Related Keywords

Belgaum , Karnataka , India , Mangalore , , Electronics End , Vivekananda Association College , College Training , Engineering End , Science End , Civil Engineering , Science End Engineering , பெல்காம் , கர்நாடகா , இந்தியா , மங்களூர் , மின்னணுவியல் முடிவு , கல்லூரி பயிற்சி , சிவில் பொறியியல் ,

© 2025 Vimarsana