ಹಿಂದಿನ ಸ್ವಾತಂತ್ರ್ಯೋತ್ಸವದ ಭಾಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಮೂಲ ಸೌಕರ್ಯ ಅಭಿವೃದ್ಧಿ‘ಗಾಗಿ ಲಕ್ಷ ಕೋಟಿ ಘೋಷಣೆ ಮಾಡಿರುವುದನ್ನು ಉಲ್ಲೇಖಿಸಿದ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ‘ಪ್ರತಿ ವರ್ಷ ದೇಶದ ಜಿಡಿಪಿಗಿಂತ ದೇಶದ ಮೂಲಸೌಕರ್ಯ ಅಭಿವೃದ್ಧಿಯ ಯೋಜನೆ ಗಾತ್ರವೇ ವೇಗವಾಗಿ ಬೆಳೆಯುತ್ತಿದ್ದು, ಅಷ್ಟಕ್ಕೇ ನಾವೆಲ್ಲ ‘ಸಂತೋಷಪಡಬೇಕಿದೆ‘ ಎಂದು ಟ್ವೀಟ್ ಮಾಡಿದ್ದಾರೆ.