ದುಡಿಮೆ ಇಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಬಡವರಿಗೆ, ಬೀದಿ ಬದಿಯಲ್ಲೇ ಜೀವನ ಕಳೆಯುವ ಅಲೆಮಾರಿಗಳಿಗೆ, ಕೂಲಿಕಾರ್ಮಿಕರಿಗೆ, ಭಿಕ್ಷುಕರಿಗೆ ‘ಇಂದಿರಾ ಕ್ಯಾಂಟೀನ್’ಗಳು ವರದಾನವಾಗಿವೆ. ಆದರೆ, ಈಚಿನ ದಿನಗಳಲ್ಲಿ ಕ್ಯಾಂಟೀನ್‌ಗಳಲ್ಲಿ ಅತಿ ಕಡಿಮೆ ದರಕ್ಕೆ ಸಿಗುವ ಆಹಾರ ಸೇವನೆಗೂ ಜನರು ಹಿಂದೇಟು ಹಾಕುತ್ತಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.