ಮುಂಬೈ: ರಾತ&#

ಮುಂಬೈ: ರಾತ್ರಿಯಿಡೀ ಸುರಿದ ಭಾರಿ ಮಳೆ, ಹಲವು ಪ್ರದೇಶಗಳು ಜಲಾವೃತ


Mumbai suburbs receive intense rainfall overnight several places inundated
ಮುಂಬೈ: ರಾತ್ರಿಯಿಡೀ ಸುರಿದ ಭಾರಿ ಮಳೆ, ಹಲವು ಪ್ರದೇಶಗಳು ಜಲಾವೃತ
ಡೆಕ್ಕನ್‌ ಹೆರಾಲ್ಡ್‌ Updated:
18 ಜುಲೈ 2021, 07:39 IST
ಅಕ್ಷರ ಗಾತ್ರ :ಆ |ಆ |ಆ
ಮಹಾರಾಷ್ಟ್ರ: ಮುಂಬೈನಲ್ಲಿ ಶನಿವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ.
ಬೃಹನ್‌ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಸೇರಿದಂತೆ ಪಾಲ್ಘರ್‌, ಥಾಣೆ, ರಾಯ್‌ಗಡ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.
ಈ ಕುರಿತು ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಪ್ರತಿಕ್ರಿಯಿಸಿದ್ದು, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
‘ಮುಂಜಾನೆ 3 ಗಂಟೆ ಸುಮಾರಿಗೆ ಮುಂಬೈ ನಗರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ 200 ಮಿ.ಮೀ ಮಳೆಯಾಗಿದೆ. ಹಾನಿಗೊಳಗಾದ ಪ್ರದೇಶಗಳಿಗೆ ಬಿಎಂಸಿ ಅಧಿಕಾರಿಗಳ ತಂಡಗಳು ಧಾವಿಸಿದ್ದು, ನೀರು ಹೊರಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆದಿತ್ಯ ಠಾಕ್ರೆ ಟ್ವೀಟ್‌ ಮಾಡಿದ್ದಾರೆ.
‘ಮುಂಬೈನಲ್ಲಿ ಅತಿ ಕಡಿಮೆ ಸಮಯದಲ್ಲಿ ಭಾರಿ ಮಳೆಯಾಗಿದ್ದು, ಕೆಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ’ ಎಂದು ಪುಣೆಯ ಹವಾಮಾನ ಮತ್ತು ಸಂಶೋಧನಾ ಸೇವೆಗಳ (ಎಸ್‌ಐಡಿ) ಮುಖ್ಯಸ್ಥ ಕೆ.ಎಸ್.ಹೊಸಾಲಿಕರ್ ಟ್ವೀಟ್ ಮಾಡಿದ್ದಾರೆ.
#WATCH | Maharashtra: Rainwater entered Mumbai's Borivali east area following a heavy downpour this morning pic.twitter.com/7295IL0K5K

Related Keywords

Mumbai , Maharashtra , India , Pune , Aditya Thackeray , , Mumbai Saturday , Maharashtra Tourism Minister Aditya Thackeray , மும்பை , மகாராஷ்டிரா , இந்தியா , புனே , மும்பை சனிக்கிழமை ,

© 2025 Vimarsana