ಬಿಎಸ್‌ವೈ &#

ಬಿಎಸ್‌ವೈ ಮುಂದುವರಿಯುತ್ತಾರೊ ಇಲ್ಲವೋ ಕಟೀಲ್‌ ಸ್ಪಷ್ಟಪಡಿಸಲಿ: ಯು ಟಿ ಖಾದರ್‌


ut khader says nalin kumar kateel should clarify about BS Yediyurappas leadership
ಕೋವಿಡ್‌ ತಡೆ ಲಸಿಕೆ ಸಮಸ್ಯೆ ನಿವಾರಿಸಿ: ಶಾಸಕ ಯು.ಟಿ. ಖಾದರ್
ಬಿಎಸ್‌ವೈ ಮುಂದುವರಿಯುತ್ತಾರೊ ಇಲ್ಲವೋ ಕಟೀಲ್‌ ಸ್ಪಷ್ಟಪಡಿಸಲಿ: ಯು ಟಿ ಖಾದರ್‌
ಪ್ರಜಾವಾಣಿ ವಾರ್ತೆ Updated:
21 ಜುಲೈ 2021, 08:58 IST
ಅಕ್ಷರ ಗಾತ್ರ :ಆ |ಆ |ಆ
ಮಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಆಡಿಯೊ ನಕಲಿಯೇ, ಅಸಲಿಯೇ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು. ಯಡಿಯೂರಪ್ಪ ಮುಂದುವರಿಯುತ್ತಾರೊ ಇಲ್ಲವೋ ಎಂಬುದನ್ನು ನಳಿನ್‌ಕುಮಾರ್‌ ಕಟೀಲ್‌ ತಿಳಿಸಬೇಕು ಎಂದು ಶಾಸಕ ಯು.ಟಿ.ಖಾದರ್  ಒತ್ತಾಯಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಜಗಳ ನಡೆಯುತ್ತಿಲ್ಲ. ಬಿಜೆಪಿ ಸರ್ಕಾರ ವಿಫಲವಾಗಿದ್ದು, ಸಹಜವಾಗಿ ಜನರು ಕಾಂಗ್ರೆಸ್ ಮುಖ್ಯಮಂತ್ರಿ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಬಣಗಳ ರಾಜಕೀಯ ಇಲ್ಲ ಎಂದು ತಿಳಿಸಿದರು.
ಉಳ್ಳಾಲ, ಸೋಮೇಶ್ವರ್ ಬೀಚ್‌ ರಸ್ತೆಗಳು ಸಮುದ್ರ ಪಾಲಾಗುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಎಲ್ಲವೂ ಸಮುದ್ರ ಪಾಲಾಗುತ್ತಿದೆ. ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಕೋವಿಡ್‌ ತಡೆ ಉಚಿತ ಲಸಿಕೆ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ರಾಜ್ಯದಲ್ಲಿ ಪ್ರತಿ ದಿನ ಸುಮಾರು ಒಂದೂವರೆ ಲಕ್ಷ ಡೋಸ್ ಲಸಿಕೆ ಅಗತ್ಯ ಇದೆ. ಆದರೆ ವಾರಕ್ಕೆ 50 ಸಾವಿರ ಡೋಸ್‌ ಮಾತ್ರ ಸರಬರಾಜಾಗುತ್ತಿದೆ ಎಂದು ಟೀಕಿಸಿದರು.
ಡಿಸಿಸಿ ಅಧ್ಯಕ್ಷ, ಶಾಸಕ ಹರೀಶ್‌ಕುಮಾರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಜೆ.ಆರ್.ಲೋಬೊ ಇದ್ದರು.
‘ಸಾವಿನ ಸಂಖ್ಯೆ ಮರೆಮಾಚಿದ ಸರ್ಕಾರ’: ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಧನ ನೀಡುವುದರಿಂದ ತಪ್ಪಿಸಿಕೊಳ್ಳಲು ರಾಜ್ಯದ ಬಿಜೆಪಿ ಸರ್ಕಾರ ಕೋವಿಡ್ ಸಾವಿನ ಸಂಖ್ಯೆಯನ್ನು ಮರೆಮಾಚುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 3 ಲಕ್ಷಕ್ಕಿಂತ ಹೆಚ್ಚು ಮಂದಿ ಕೋವಿಡ್ ಕಾರಣಕ್ಕಾಗಿ ಮೃತಪಟ್ಟಿದ್ದಾರೆ. ಆದರೆ ಸರ್ಕಾರ 30 ಸಾವಿರ ಎಂದು ಹೇಳುತ್ತಿದೆ. ಪರಿಹಾರ ಘೋಷಣೆ ಮಾಡಿರುವುದು ತಲಾ ₹1 ಲಕ್ಷ ಮಾತ್ರ. ಕನಿಷ್ಠ ₹ 5ಲಕ್ಷ ಪರಿಹಾರ ಕೊಡಬೇಕು ಎಂದರು.
ಭಿನ್ನಮತೀಯ ಚಟುವಟಿಕೆಯಿಂದ ಸಚಿವರು ಕೆಲಸ ಮಾಡುತ್ತಿಲ್ಲ. ಜನರ ಸಂಕಷ್ಟಗಳಿಗ ಸ್ಪಂದಿಸುವವರು ಇಲ್ಲ ಎಂದರು.

Related Keywords

Ullal , Karnataka , India , Mangalore , , District Review , Speaking Rai , உள்ளால் , கர்நாடகா , இந்தியா , மங்களூர் , மாவட்டம் விமர்சனம் ,

© 2025 Vimarsana