ಕಲ್ಯಾಣ ಕರ&#x

ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಯ ಬಗ್ಗೆ ಸಂಘಟಿತ ಒತ್ತಾಯಕ್ಕೆ ಕಲ್ಯಾಣ ಕರ್ನಾಟಕ ಶಾಸಕರ ಸಭೆಗೆ ಆಗ್ರಹ


Sanjevani
ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಯ ಬಗ್ಗೆ ಸಂಘಟಿತ ಒತ್ತಾಯಕ್ಕೆ ಕಲ್ಯಾಣ ಕರ್ನಾಟಕ ಶಾಸಕರ ಸಭೆಗೆ...
ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಯ ಬಗ್ಗೆ ಸಂಘಟಿತ ಒತ್ತಾಯಕ್ಕೆ ಕಲ್ಯಾಣ ಕರ್ನಾಟಕ ಶಾಸಕರ ಸಭೆಗೆ ಆಗ್ರಹ
ಕಲಬುರಗಿ : ಜೂ.30:ಕಲ್ಯಾಣ ಕರ್ನಾಟಕದ ಸರ್ವಾಂಗೀಣ ರಚನಾತ್ಮಕ ಪ್ರಗತಿಯ ಕುರಿತು ದಿನಾಂಕ : 01.07.2021 ರಂದು ಗುರುವಾರ ಬೆಂಗಳೂರಿನ ಶಾಸಕರ ಭವನದಲ್ಲಿ ಹಮ್ಮಿಕೊಂಡಿರುವ ಕಲ್ಯಾಣ ಕರ್ನಾಟಕದ ಶಾಸಕರ ಸಭೆಯಲ್ಲಿ ಕಲ್ಯಾಣ ಕರ್ನಾಟಕ ರಚನಾತ್ಮಕ ಪ್ರಗತಿಗೆ ಸಂಬಂಧಿಸಿ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ವತಿಯಿಂದ ಪ್ರಮುಖ ಬೇಡಿಕೆಗಳ ಬಗ್ಗೆ ಮಾನ್ಯ ಶಾಸಕರುಗಳು ಸ್ಪಂದಿಸಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡು ಮುಖ್ಯಮಂತ್ರಿಗಳ ಮೇಲೆ ಅಧಿಕೃತ ಒತ್ತಡ ತರಲು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಆಗ್ರಹಿಸಿದ್ದಾರೆ.
ಸಮಾನ ಮನಸ್ಕ ಶಾಸಕರು ಸೇರಿಕೊಂಡು ಪಕ್ಷಾತೀತವಾಗಿ ಜುಲೈ 1 ರಂದು ಶಾಸಕರ ಭವನದಲ್ಲಿ ಕರೆದಿರುವ ಕಲ್ಯಾಣ ಕರ್ನಾಟಕ ಶಾಸಕರ ಸಭೆಗೆ ಸಮಿತಿ ಪ್ರಮುಖ ವಿಷಯಗಳನ್ನು ಸಭೆಯಲ್ಲಿ ಮಂಡಿಸಲು ಕೋರಿದೆ. ಮುಖ್ಯಮಂತ್ರಿಗಳು 1) ದಿನಾಂಕ : 17.09.2019 ರಂದು ಕಲಬುರಗಿಯಲ್ಲಿ ಘೋಷಣೆ ಮಾಡಿರುವಂತೆ 371ನೇ (ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಿ ಈ ವಿಶೇಷ ಸ್ಥಾನಮಾನದಿಂದ ಸಿಗುವ ಎಲ್ಲಾ ಸವಲತ್ತುಗಳು ಮತ್ತು ಅಭಿವೃದ್ಧಿಪರ ವಿಷಯಗಳಿಗೆ ಸಂಬಂಧಿಸಿ ಕಲ್ಯಾಣ ಕರ್ನಾಟಕಕ್ಕೆ ನ್ಯಾಯ ಒದಗಿಸುವಂತೆ ನಿರ್ಣಯ ಕೈಗೊಳ್ಳಬೇಕು.
ಪ್ರಸ್ತುತ ಕೇಂದ್ರ ಸರಕಾರದಿಂದ ಮಂಜೂರಾದ ಏಮ್ಸ್, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸ್ಥಾಪಿಸಲು ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಅಧಿಕೃತವಾಗಿ ಪ್ರಸ್ತಾವನೆ ಸಲ್ಲಿಸಿ ಕಲ್ಯಾಣ ಕರ್ನಾಟಕದಲ್ಲಿ ಈ ಸಂಸ್ಥೆ ಸ್ಥಾಪಿಸಲು ರಾಜ್ಯ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸುವಂತೆ ಒತ್ತಡ ತರಬೇಕು.
ಕಲ್ಯಾಣ ಕರ್ನಾಟಕ ಪ್ರದೇಶದ ನೀರಾವರಿ, ಕೈಗಾರಿಕೆ, ಉದ್ಯೋಗ, ಶಿಕ್ಷಣ, ರಸ್ತೆ ಸಾರಿಗೆ ಮುಂತಾಗಿ ಎಲ್ಲಾ ಕ್ಷೇತ್ರದ ರಚನಾತ್ಮಕ ಪ್ರಗತಿಗೆ ರಾಜ್ಯ ಸರಕಾರದ ಸಂಪನ್ಮೂಲಗಳ ಜೊತೆಗೆ ಕೇಂದ್ರ ಸರಕಾರದಿಂದ ವಿಶೇಷ ಪ್ಯಾಕೇಜ್ ಪಡೆಯುವುದು ಅತಿ ಅವಶ್ಯವಾಗಿದೆ. ಈ ಬಗ್ಗೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಒಂದು ಕ್ರಿಯಾ ಯೋಜನೆಯನ್ನು ತಯಾರಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಕೇಂದ್ರದಿಂದ ವಿಶೇಷ ಪ್ಯಾಕೇಜ ಹಣ ಪಡೆಯಲು ರಾಜ್ಯ ಸರಕಾರದಿಂದ ಅಧಿಕೃತ ಕ್ರಮ ಕೈಗೊಳ್ಳುವಂತೆ ಒತ್ತಡ ತರಬೇಕು.
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ರುಟಿನ ಬಜೆಟ್ ಜೊತೆಗೆ ಮಂಡಳಿಗೆ ಪ್ರತ್ಯೇಕ ಹಣ ಮಂಜೂರಾಗುವುದು ಅದರಂತೆ ನಂಜುಂಡಪ್ಪ ವರದಿಯಂತೆ ವಿಶೇಷ ಅನುದಾನ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಂಸ್ಕೃತಿಕ ಸಂಘಕ್ಕೆ ಪ್ರತ್ಯೇಕವಾಗಿ ಹಣ ನಿಗದಿಯಾಗುವುದರಿಂದ ಆಯಾ ಬಾಬ್ತಿನ ಹಣ ಎಷ್ಟು ಮಂಜೂರಾಗುತ್ತಿದೆ ಮತ್ತು ಎಷ್ಟು ಬಿಡುಗಡೆಯಾಗುತ್ತಿದೆ ಹಾಗೂ ನಿಜವಾಗಿಯೂ ವೆಚ್ಚವಾಗುವುದರ ಬಗ್ಗೆ ಸ್ಪಷ್ಟವಾಗಿ ಸರಕಾರದ ಗಮನಕ್ಕೆ ಬರಲು ಹಾಗೂ ಜನಮಾನಸದ ಗಮನಕ್ಕೆ ಬರಲು ಅದರಂತೆ ಇದಕ್ಕೆ ಪೂರಕವಾಗಿ ರಚನಾತ್ಮಕ ಪ್ರಗತಿ ಕೈಗೊಳ್ಳಲು ಕಲ್ಯಾಣ ಕರ್ನಾಟಕ ಪ್ರದೇಶ ಸಮತೋಲನವಾಗುವವರೆಗೆ ಪ್ರತ್ಯೇಕ ಬಜೆಟ್ ಮಂಡನೆ ಮಾಡುವುದು ಅತಿ ಅವಶ್ಯವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಮೇಲೆ ಅಧಿಕೃತ ಒತ್ತಡ ತರಬೇಕು.
ವಿಶೇಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳಿಗೆ ನಮ್ಮ ಹಕ್ಕಿನ ಮೀಸಲಾತಿಯಂತೆ ಎಂಟು ಮಂತ್ರಿ ಸ್ಥಾನಗಳು ಸಿಗಬೇಕು ಆದರೆ ಈಗ ಕೇವಲ ಎರಡೇ ಮಂತ್ರಿ ಸ್ಥಾನಗಳು ದಕ್ಕಿವೆ ಪ್ರಯುಕ್ತ ಮಂತ್ರಿ ಮಂಡಲದಲ್ಲಿ ನಮಗೆ ಸಿಗಬೇಕಾದ ನ್ಯಾಯಯುತವಾದ ಸ್ಥಾನಗಳನ್ನು ನೀಡಲು ಮುಖ್ಯಮಂತ್ರಿಗಳ ಮೇಲೆ ಬಲವಾದ ಅಧಿಕೃತ ಒತ್ತಡ ತರಬೆಕು.
ಕಲ್ಯಾಣ ಕರ್ನಾಟಕ ಪ್ರದೇಶದ ವಿಶೇಷ ಅಭಿವೃದ್ಧಿಗೆ ಸ್ಥಾಪನೆಯಾದ ಅಭಿವೃದ್ಧಿ ಮಂಡಳಿಯಿಂದ ಸರಕಾರದ ರುಟಿನ್ ಬಜೆಟಿನ ಯೋಜನೆಗಳನ್ನು ಹೊರತುಪಡಿಸಿ ವಿಶೇಷ ಯೋಜನೆಗಳನ್ನು ಹಮ್ಮಿಕೊಂಡು ಕಾಲಮಿತಿಯ ದೂರದೃಷ್ಟಿಕೋನದ ಕ್ರಿಯಾ ಯೋಜನೆಯನ್ನು ರೂಪಿಸಿ ಇದಕ್ಕೆ ಸಮರ್ಪಕ ಅನುದಾನ ನೀಡಿ ಪ್ರಾದೇಶಿಕ ಅಸಮತೋಲನೆಗೆ ನಿರ್ಧಿಷ್ಟ ಗಡುವು ನಿಗದಿಪಡಿಸಲು ರಾಜ್ಯ ಸರಕಾರ ಇಚ್ಛಾಶಕ್ತಿ ವ್ಯಕ್ತಪಡಿಸುವುದರ ಬಗ್ಗೆ ಒತ್ತಡ ತರಬೇಕು.
ಕಲ್ಯಾಣ ಕರ್ನಾಟಕ ಪ್ರದೇಶದ ವಿಭಾಗೀಯ ಕೇಂದ್ರ, ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆಗೆ ಸಂಬಂಧಿಸಿ ಈ ಹಿಂದೆ ಸರೀನ್ ಕಮಿಟಿ ವರದಿ ನೀಡಿರುವಂತೆ ಅದರಂತೆ ನಿರಂತರ ಹೋರಾಟ ಮತ್ತು ಒತ್ತಾಯಕ್ಕೆ ಪೂರಕವಾಗಿ ಆಯಾ ಸರಕಾರದ ಸಂದರ್ಭದಲ್ಲಿ ಗಮನಕ್ಕೆ ತಂದರೂ ಸಹ ನಿರ್ಲಕ್ಷ ಮಾಡಲಾಗುತ್ತಿದೆ. ಪ್ರಯುಕ್ತ ರೈಲ್ವೆ ವಿಭಾಗೀಯ ಕಚೇರಿಯ ಸ್ಥಾಪನೆಗೆ ಸಂಬಂಧಿಸಿ ಕೇಂದ್ರದ ಮೇಲೆ ರಾಜ್ಯ ಸರಕಾರದ ವತಿಯಿಂದ ಅಧಿಕೃತ ಒತ್ತಡ ಹಾಕಲು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಬೇಕು.
ಸಂವಿಧಾನದ 371ನೇ (ಜೆ) ಕಲಮಿನಲ್ಲಿರುವ ದೋಷಗಳ ನಿವಾರಣೆಗೆ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಕೈಗೊಳ್ಳಬೇಕಾದ ನಿಯಮಗಳ ಬಗ್ಗೆ ಈಗಾಗಲೇ ತಾವು ಘೋಷಣೆ ಮಾಡಿರುವಂತೆ ನಿಯಮಗಳಲ್ಲಿರುವ ದೋಷಗಳನ್ನು ನಿವಾರಿಸಿ, ಹೊಸ ನಿಯಮಗಳ ಕರಡು ರಚಿಸಿ ವಿಶೇಷ ಸ್ಥಾನಮಾನದದಿ ಸಿಗುವ ನೇಮಕಾತಿ ಮತ್ತು ಮುಂಬಡ್ತಿ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಗಳು ಸಮರ್ಪಕವಾಗಿ ಸಿಗುವಂತೆ ಕ್ರಮ ಕೈಗೊಳ್ಳಬೇಕು. (ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಡಿ.ಪಿ.ಎ.ಆರ್., ಕಾರ್ಯದರ್ಶಿಗಳು ಹಾಗೂ ಕಾನೂನು ಇಲಾಖೆಯ ಕಾರ್ಯದರ್ಶಿಗಳು ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಪರಿಣಿತ ಚಿಂತಕ ಹೋರಾಟಗಾರರ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು.) ಈ ಬಗ್ಗೆ ಅತಿ ಗಂಭೀರವಾಗಿ ಪರಿಗಣಿಸಿ ವಿಶೇಷ ಮುತುವರ್ಜಿ ವಹಿಸಿ ಮುಖ್ಯಮಂತ್ರಿಗಳ ಮೇಲ

Related Keywords

Karnataka , India , Bengaluru , , Karnataka Region Division Center , Center Introduction , Division Office , Division Center , Karnataka Region , Thursday Bengaluru , Ministry Create , Progress State , Department Secretary , கர்நாடகா , இந்தியா , பெங்களூரு , மையம் அறிமுகம் , பிரிவு அலுவலகம் , பிரிவு மையம் , கர்நாடகா பகுதி , வியாழன் பெங்களூரு , துறை செயலாளர் ,

© 2025 Vimarsana