ಮೌಲ್ಯಧಾರ

ಮೌಲ್ಯಧಾರಿತ ಉತ್ತಮ ಸಂಸ್ಕಾರ ಬೆಳೆಸುವ ಶಿಕ್ಷಣದ ಅವಶ್ಯಕತೆ ಇದೆ: ತಲ್ಲೂರ


Sanjevani
ಮೌಲ್ಯಧಾರಿತ ಉತ್ತಮ ಸಂಸ್ಕಾರ ಬೆಳೆಸುವ ಶಿಕ್ಷಣದ ಅವಶ್ಯಕತೆ ಇದೆ: ತಲ್ಲೂರ
ಮೌಲ್ಯಧಾರಿತ ಉತ್ತಮ ಸಂಸ್ಕಾರ ಬೆಳೆಸುವ ಶಿಕ್ಷಣದ ಅವಶ್ಯಕತೆ ಇದೆ: ತಲ್ಲೂರ
ಧಾರವಾಡ, ಆ4- ಇಂದಿನ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮೌಲ್ಯಧಾರಿತ ಉತ್ತಮ ಸಂಸ್ಕಾರವನ್ನು ಬೆಳಸುವ ಶಿಕ್ಷಣವನ್ನು ನೀಡಬೇಕಾದ ಅವಶ್ಯಕತೆ ಇದೆ ಎಂದು ಕÀರ್ನಾಟಕ ಲೋಕೊಪಯೋಗಿ ಬಂದುರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ವಿಶ್ರಾಂತ ಕಾರ್ಯದರ್ಶಿ ಜೆ.ಸಿ.ತಲೂರ ಅಭಿಪ್ರಾಯಪಟ್ಟರು.
ಅವರು ನಗರದ ಕರ್ನಾಟಕ ವಿಶ್ವವಿದ್ಯಾಲಯವು ಸೆನೆಟ್ ಸಭಾಂಗಣದಲ್ಲಿ ‘ಶಿಕ್ಷಣತಜ್ಞರ ದಿನಾಚರಣೆ’ಯ ಅಂಗವಾಗಿ ಆಯೋಜಿಸಿದ ಡಾ. ಡಿ.ಸಿ.ಪಾವಟೆ ಸ್ಮಾರಕ ಮೂಲತತ್ವ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಭಾರತದಲ್ಲಿ ಶಿಕ್ಷಣ ಮತ್ತು ನೈತಿಕತೆ’ ಎಂಬ ವಿಷಯದ ಕುರಿತು ಮಾತನಾಡಿದರು.
ಇಂದಿನ ಶಿಕ್ಷಣ ಪದ್ಧತಿಯು ಶಿಕ್ಷಣವನ್ನು ಕೇವಲ ಉಪಜೀವನಕ್ಕಾಗಿ ಪಡೆಯುಲಾಗುತ್ತಿದೆ ಹೊರತು ಜ್ಞಾನಕ್ಕಾಗಿ ಅಲ್ಲ ಎಂದ ಅವರು ಬ್ರಿಟೀಷ್ ಕಾಲದಿಂದಲೂ ಹಂಟರ್ ಆಯೋಗದಿಂದ ಹಿಡಿದು ಅನೇಕ ಶೈಕ್ಷಣಿಕ ಆಯೋಗಗಳು ಮೌಲ್ಯಧಾರಿತ ನೈತಿಕÀ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟಿಲ್ಲ. ಮಹಾತ್ಮಾ ಗಾಂಧೀಜಿ ಸೇರಿದಂತೆ ಅನೇಕ ಮಹಾತ್ಮರು ಮೂಲಭೂತ ನೈತಿಕ ಅಂಶಗಳನ್ನು ಶಿಕ್ಷಣದಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿದ್ದರು.
ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ.ಗುಡಸಿ ಮಾತನಾಡಿ ಲಾರ್ಡ ಮೇಕಾಲೆ ಶಿಕ್ಷಣ ಪದ್ದತಿ ಕೇವಲ ಕೆಲಸಕ್ಕೆ ಮಾತ್ರ ಸಿಮಿತವಾಗಿತ್ತು. ಆದರೆ 2020ನೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಯು ಯಾವದೇ ರೀತಿಯ ಅವಲಂಬನೆ ಆಗದೆ ಅವನು ತನಗೆ ಬೇಕಾದ ಇಷ್ಟದ ಕೋರ್ಸಗಳನ್ನು ಆಯ್ಕೆ ಮಾಡಿಕೊಂಡು ತನ್ನ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಾಧ್ಯ ಎಂದ ಅವರು ಭವಿಷ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾದ ಪರಿವರ್ತನೆ ಆಗಲಿದೆ. ಕರ್ನಾಟಕ ವಿಶ್ವವಿದ್ಯಾಲಯವನ್ನು ದೇಶದ ಉತ್ತಮ ದರ್ಜೆಯ ವಿಶ್ವವಿದ್ಯಾಲಯವನ್ನಾಗಿ ಮಾಡಿದ ಕೀರ್ತಿ ಅವರಿಗೆ ಡಾ. ಡಿ.ಸಿ. ಪಾವಟೆ ಅವರೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕವಿವಿ ಕುಲಸಚಿವರಾದ ಡಾ. ಕೆ.ಟಿ.ಹನುಮಂತಪ್ಪ, ಮೌಲ್ಯಮಾಪನ ಕುಲಸಚಿವರಾದ ಪ್ರೊ. ಹೆಚ್.ನಾಗರಾಜ್, ಪ್ರೊ. ಸಂಜೀವ ಇನಾಂದಾರ, ಡಾ.ಎಸ್.ಎಸ್. ಪಟಗುಂಡಿ, ಡಾ. ಮಲ್ಲಿಕಾರ್ಜನ ಪಾಟೀಲ, ಡಾ. ತೋಣನ್ನವರ, ಡಾ. ಕರಿದುರ್ಗನ್ನವರ ಡಾ. ಬಿ.ಹೆಚ್ ನಾಗೂರ, ಪ್ರಸಾರಾಂಗದ ಡಾ. ಚಂದ್ರಶೇಖರ ರೊಟ್ಟಿಗವಾಡ ಡಾ. ಎನ್.ಸಿದ್ದಪ್ಪ ಸೇರಿದಂತೆ ಸಿಂಡಿಕೇಟ್ ಸದಸ್ಯರು ಪ್ರಾಧ್ಯಾಪಕರು ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ಇತರರು ಹಾಜರಿದ್ದರು.

Related Keywords

Dharwad , Karnataka , India , United Kingdom , British , Mahatma Gandhi , Mallikarjun Patil , Hunter Commission , Karnataka University , Program India Education , Karnataka University Senate , Program Da , Karnataka University Chancellor Pro , தர்வாத் , கர்நாடகா , இந்தியா , ஒன்றுபட்டது கிஂக்டம் , பிரிட்டிஷ் , மகாத்மா காந்தி , மல்லிகார்ஜூன் பாட்டீல் , வேட்டைக்காரன் தரகு , கர்நாடகா பல்கலைக்கழகம் ,

© 2025 Vimarsana