ಬೇಧಿಸಿದ್

ಬೇಧಿಸಿದ್ದ ಪ್ರಕರಣಗಳ ಕುರಿತು ಮಾಹಿತಿ ನೀಡಿದ ವರ್ಗಾವಣೆಗೊಂಡ ಎಸ್ಪಿ ಅನುಪಮ ಅಗರವಾಲ್


Sanjevani
ಬೇಧಿಸಿದ್ದ ಪ್ರಕರಣಗಳ ಕುರಿತು ಮಾಹಿತಿ ನೀಡಿದ ವರ್ಗಾವಣೆಗೊಂಡ ಎಸ್ಪಿ ಅನುಪಮ ಅಗರವಾಲ್
ಬೇಧಿಸಿದ್ದ ಪ್ರಕರಣಗಳ ಕುರಿತು ಮಾಹಿತಿ ನೀಡಿದ ವರ್ಗಾವಣೆಗೊಂಡ ಎಸ್ಪಿ ಅನುಪಮ ಅಗರವಾಲ್
ವಿಜಯಪುರ, ಜು.18-ಜಿಲ್ಲೆಯ ಎಸ್ ಪಿ ಅನುಪಮ ಅಗರವಾಲ ಇದೀಗ ವರ್ಗಾವಣೆ ಗೊಂಡಿದ್ದಾರೆ. ವಿಜಯಪುರಕ್ಕೆ ನೂತನ ಎಸ್ಪಿಯಾಗಿ ಆನಂದಕುಮಾರ ನಿಯುಕ್ತಿ ಗೊಂಡಿದ್ದಾರೆ. ಇನ್ನೂ ಎಸ್.ಪಿ ಅನುಪಮ ಅಗರವಾಲ ಕೊನೆ ಕ್ಷಣದಲ್ಲಿ ಮಾದ್ಯಮಗೋಷ್ಠಿ ನಡೆಸಿ ಜಿಲ್ಲೆಯಲ್ಲಿ ತಮ್ಮ ಮಾರ್ಗದರ್ಶನದಲ್ಲಿ ನಡೆದ ಕೆಲವೊಂದಿಷ್ಟು ಪ್ರಕರಣಗಳನ್ನು ಬೇಧಿಸಿದ್ದು ಅವುಗಳ ಕುರಿತು ಮಾಹಿತಿ ನೀಡಿದರು.
ವಿಜಯಪುರ ಜಿಲ್ಲೆ ಎಂದಾಗ ಕೆಲವು ಬಾರಿ ತನ್ನ ಕ್ರೈಮ್ ರೇಟ್ ನಿಂದಲೇ ಪ್ರಸಿದ್ದಿ ಪಡೆಯುತ್ತೆ. ಹೀಗಾಗಿ ಇಲ್ಲಿ ಅಧಿಕಾರಿಗಳು ಕೂಡ ಕಡಖ್ ಆಗಿರಬೇಕು. ಇತ್ತೀಚೆಗೆ ವರ್ಗಾವಣೆಗೊಂಡ ಎಸ್ಪಿ ಅನುಪಮ ಅಗರವಾಲ ವಿಜಯಪುರ ನಿನ್ನೆ ಸಾಯಂಕಾಲ ಮಾದ್ಯಮಗೋಷ್ಠಿ ನಡೆಸಿ ಕಳೆದ ಒಂದೆರಡು ದಿನಗಳಲ್ಲಿ ನಡೆದ ಹೀನಿಯಸ್ ಪ್ರಕರಣಗಳ ಕುರಿತು ಮಾಹಿತಿ ನೀಡಿದರು. ಮಗಳಿಗೆ ಕಾಡಿಸುತ್ತಿದ್ದ ಎನ್ನುವ ಕಾರಣಕ್ಕೆ ಯುವಕನನ್ನು ಬರ್ಬರವಾಗಿ ಕಲ್ಲಿನಿಂದ ಜಜ್ಜಿ ಹತ್ಯೆಗೈದಿರುವ ಆರೋಪಿಯನ್ನು ಬಂಧಿಸುವಲ್ಲಿ ಜಿಲ್ಲಾ ಪೆÇಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಅನುಪಮ್ ಅಗರವಾಲ್ ಮಾಹಿತಿ ನೀಡಿದರು. ನಾಗಪ್ಪ ಯಮನಪ್ಪ ಪೂಜಾರಿ ಬಂಧಿತ ಆರೋಪಿ. ಇನ್ನು ಆರೋಪಿ ಮಗಳಿಗೆ ಕಾಡಿಸುತ್ತಿದ್ದ ಮಹೇಶ ಶರಣಪ್ಪ ದಳವಾಯಿ ಯನ್ನು ಜಿಲ್ಲೆಯ ನಿಡಗುಂದಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇನ್ನು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ನಿಡಗುಂದಿ ಪೆÇಲೀಸರು ಆರೋಪಿ ನಾಗಪ್ಪನ್ನು ಅಥರ್ಗಾದಲ್ಲಿ ಬಂಧಿಸಿದ್ದಾರೆ. ಈ ಕುರಿತು ನಿಡಗುಂದಿ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಮತ್ತೊಂದು ಪ್ರಕರಣದಲ್ಲಿ ವಿಜಯಪುರದ ಮನಗೂಳಿ ನಾಕಾ ಬಳಿ ಮೂವರು ಬೈಕ್ ಗಳ್ಳರನ್ನು ಬಂಧಿಸಲಾಗಿದ್ದು, ಸಂಜು ಮಾದರ, ಲಕ್ಷ್ಮಣ ಮಾದರ, ಅರುಣ ಚಲವಾದಿ ಬಂಧಿತರು. ಬಂಧಿತರಿಂದ 8.2 ಲಕ್ಷ ಮೌಲ್ಯದ ಏಳು ಬೈಕ್ ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದರು.
ಇನ್ನು ಆರೋಪಿಗಳ ವಿರುದ್ಧ ಅವಳಿ ಜಿಲ್ಲೆಗಳಾದ ವಿಜಯಪುರ ಹಾಗೂ ಬಾಗಲಕೋಟ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಂದೆಡೆ ಭೀಮಾತೀರದ ಹೊರವಲಯದ ಉಮದಿಯಲ್ಲಿ ಯುವತಿಯೊಂದಿಗೆ ಯುವಕನ ಅನೈತಿಕ ಶಂಕೆ ಹಿನ್ನಲೆ ಯುವಕ ಅರವಿಂದ ಹತ್ಯೆಗೈದಿದ್ದ ಮೂವರು ಆರೋಪಿಗಳನ್ನು ಚಡಚಣ ಪೆÇಲೀಸರು ಬಂಧಿಸಿದ್ದು, ಪಲ್ಲವಿ ಕಾಟಕಾರ್, ವಿಕ್ರಮ ಕಾಟಕಾರ್, ಅಜೀತ್ ಶಿಂಧೆ ಬಂಧಿತರು. ಇನ್ನು ಸಿಂದಗಿ ಯುವಕ ಅರವಿಂದ ಮೇಲೆ ಅನುಮಾನಗೈದು ಹರಿತವಾದ ಆಯುಧದಿಂಸ ಹತ್ಯೆಗೈದು ಸುಟ್ಟು ಹಾಕಿದ್ದರು ಎಂದರು ಎಸ್ಪಿ ಅಗರವಾಲ್ ಮಾಹಿತಿ ತಿಳಿಸಿದರು.
ತಮ್ಮ ಅಧಿಕಾರದ ಕೊನೆಗಳಿಗೆಯಲ್ಲಿಯೂ ನಡೆದ ಕೆಲ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಅರೆಸ್ಟ್ ಮಾಡಿಸಿ ಕಂಬಿ ಹಿಂದೆ ತಳ್ಳಿದ್ದಾರೆ. ವಿಜಯಪುರ ಜಿಲ್ಲೆಗೆ ತಮ್ಮ ಹೆಸರಿನ ಹಾಗೆಯೇ ಅನುಪಮ ಸೇವೆ ಸಲ್ಲಿಸಿದ್ದಾರೆ. ಎಸ್ಪಿ ಅನುಪಮ ಅಗರವಾಲ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ, ಮತ್ತೊಮ್ಮೆ ಉತ್ತರ ವಲಯಕ್ಕೆ ಅವರ ಸೇವೆ ದೊರಕಲಿ ಎಂದು ಬಸವನಾಡಿನ ಜನತೆ ಆಶಿಸಿದ್ದಾರೆ..

Related Keywords

Sanju , Rajasthan , India , Phoenix , Arizona , United States , Anupam Agarwal , Phoenix Service , , Rattan Chand , North Circle , சஞ்சு , ராஜஸ்தான் , இந்தியா , பீனிக்ஸ் , அரிசோனா , ஒன்றுபட்டது மாநிலங்களில் , அனுபம் அகர்வால் , பீனிக்ஸ் சேவை , ராத்தன் மந்திரம் , வடக்கு வட்டம் ,

© 2025 Vimarsana