Live Breaking News & Updates on Bangalore hotel

Stay informed with the latest breaking news from Bangalore hotel on our comprehensive webpage. Get up-to-the-minute updates on local events, politics, business, entertainment, and more. Our dedicated team of journalists delivers timely and reliable news, ensuring you're always in the know. Discover firsthand accounts, expert analysis, and exclusive interviews, all in one convenient destination. Don't miss a beat — visit our webpage for real-time breaking news in Bangalore hotel and stay connected to the pulse of your community

ದಾವಣಗೆರೆ: ನಷ್ಟದ ಸುಳಿಯಲ್ಲಿ ಹೋಟೆಲ್ ಉದ್ಯಮ


ದಾವಣಗೆರೆ: ನಷ್ಟದ ಸುಳಿಯಲ್ಲಿ ಹೋಟೆಲ್ ಉದ್ಯಮ
ಡಿ.ಕೆ. ಬಸವರಾಜು Updated:
28 ಜೂನ್ 2021, 10:54 IST
ಅಕ್ಷರ ಗಾತ್ರ :ಆ |ಆ |ಆ
ದಾವಣಗೆರೆ: ‘ಬೆಣ್ಣೆದೋಸೆ’ಯಿಂದಲೇ ಪ್ರಸಿದ್ಧಿಯಾಗಿರುವ ಜಿಲ್ಲೆಯ ಹೋಟೆಲ್ ಉದ್ಯಮ ಸಂಕಷ್ಟದಲ್ಲಿದೆ. ಕೊರೊನಾ ಸೋಂಕಿನ ಕಾರಣಕ್ಕೆ ಸರ್ಕಾರ ವಿಧಿಸಿದ ಲಾಕ್‌ಡೌನ್‌ನಿಂದಾಗಿ ಹೋಟೆಲ್‌ಗಳು ನಷ್ಟದ ಸುಳಿಗೆ ಸಿಲುಕಿವೆ. ಇದರಿಂದಾಗಿ ಹೋಟೆಲ್‌ ಮಾಲೀಕರು ಹಾಗೂ ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ.
ನಗರದಲ್ಲಿ ಶೇ 90ರಷ್ಟು ಹೋಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅಲ್ಲದೇ ಸಾಲ ಪಡೆದು ಹೋಟೆಲ್ ಆರಂಭಿಸಿದವರು ಇದೀಗ ಸಾಲದ ಕಂತು ತುಂಬಲು ಹೆಣಗಾಡುತ್ತಿದ್ದಾರೆ. ವಿದ್ಯುತ್ ದರ ಹಾಗೂ ಲೈಸೆನ್ಸ್ ಶುಲ್ಕವನ್ನು ಹೆಚ್ಚಿಸಿರುವುದು ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಲಾಕ್‌ಡೌನ್‌ ಕಾರಣದಿಂದಾಗಿ ಕಾರ್ಮಿಕರು ಊರಿಗೆ ತೆರಳಿದ್ದು, ಅವರಿಗೂ ಅರ್ಧ ಸಂಬಳ ಪಾವತಿಸಬೇಕಾದ ಅನಿವಾರ್ಯ ಮಾಲೀಕರಿಗೆ ಎದುರಾಗಿದೆ. 
ಲಾಕ್‌ಡೌನ್ ಸಂದರ್ಭ ಪಾರ್ಸೆಲ್‌ಗೆ ಅವಕಾಶ ಕಲ್ಪಿಸಿದ್ದರೂ ವಹಿವಾಟು ನಡೆದಿದ್ದು ಶೇ 20ರಷ್ಟು ಮಾತ್ರ. ಇದೀಗ ಲಾಕ್‌ಡೌನ್ ಸಡಿಲಗೊಳಿಸಿದ್ದು, ಗ್ರಾಹಕರು ಹೋಟೆಲ್‌ಗೆ ಬಾರದಿದ್ದರೆ ಉದ್ಯಮ ನಡೆಸುವುದು ಹೇಗೆ ಎಂಬ ಚಿಂತೆ ಮಾಲೀಕರನ್ನು ಕಾಡುತ್ತಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಹೋಟೆಲ್ ಮಾಲೀಕರು ಲಾಭದ ಮಾತಿರಲಿ ಉದ್ಯಮ ಉಳಿಸಿಕೊಂಡರೆ ಸಾಕು ಎಂಬ ಚಿಂತೆಯಲ್ಲಿದ್ದಾರೆ. ಕೊರೊನಾ ನಂತರ ಕೆಲವು ಹೋಟೆಲ್‌ಗಳು ಶಾಶ್ವತವಾಗಿ ಮುಚ್ಚಬಹುದು. ಇಲ್ಲವೇ ಕೈ ಬದಲಾಗಬಹುದು ಎಂದು ಹೋಟೆಲ್ ಮಾಲೀಕರು ಅನುಮಾನ ವ್ಯಕ್ತಪಡಿಸುತ್ತಾರೆ.
ಕಾರ್ಮಿಕರು ಅತಂತ್ರ: ಹೋಟೆಲ್‌ನಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಲಾಕ್‌ಡೌನ್ ಅವಧಿಯ‌ಲ್ಲಿ ಗಾರೆಕೆಲಸ, ತರಗಾರರ ಕೆಲಸ, ಅಡಿಕೆ ಶುಚಿ ಮಾಡುವುದು, ತರಕಾರಿ, ಹಣ್ಣು ವ್ಯಾಪಾರ, ಕೆಲವರು ಕಾಫಿ ಎಸ್ಟೇಟ್‌ಗಳಲ್ಲಿ ದುಡಿಯುತ್ತಿದ್ದಾರೆ. ಮಹಿಳೆಯರು ಹಲವು ಮನೆಗಳಲ್ಲಿ ಅಡುಗೆ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದು, ಇದೀಗ ಹೋಟೆಲ್‌ಗಳು ತೆರೆದಿದ್ದರಿಂದ ವಾಪಸ್ ಆಗಿದ್ದಾರೆ.
ಲಾಕ್‌ಡೌನ್ ನಂತರವೂ ಗ್ರಾಹಕರಿಲ್ಲ : ‘ಲಾಕ್‌ಡೌನ್ ಮುಗಿದರೂ ಕೊರೊನಾ ಭಯದಿಂದಾಗಿ ಗ್ರಾಹಕರು ಹೋಟೆಲ್‌ಗಳಿಗೆ ಬರುವುದು ಕಡಿಮೆಯೇ. ಶಾಲಾ–ಕಾಲೇಜು, ಸರ್ಕಾರಿ ಕಚೇರಿಗಳಿಗೆ ಬರುವವರು ಹೆಚ್ಚಿನ ಮಂದಿ ಮನೆಯಿಂದಲೇ ಊಟ ತೆಗೆದುಕೊಂಡು ಬರುತ್ತಾರೆ. ಲಾಕ್‌ಡೌನ್ ಇದ್ದಾಗ ದಾವಣಗೆರೆಗೆ ಬಂದು ನೆಲೆಸಿ, ಹೋಟೆಲ್ ಊಟವನ್ನೇ ನೆಚ್ಚಿಕೊಂಡಿದ್ದ ಹಲವು ಮಂದಿ ಈಗ ಬೆಂಗಳೂರಿಗೆ ತೆರಳಿದ್ದಾರೆ. ಇದರಿಂದಾಗಿ ವ್ಯಾಪಾರ ಅಷ್ಟಕ್ಕಷ್ಟೇ ಎನ್ನುತ್ತಾರೆ’ ದಾವಣಗೆರೆ ಹೋಟೆಲ್ ಉದ್ದಿಮೆದಾರರ ಸಂಘದ ಕಾರ್ಯದರ್ಶಿ ಬಿ.ಕೆ. ಸುಬ್ರಹ್ಮಣ್ಯ.
ಬೆಲೆ ಏರಿಕೆ ಭೀತಿ: ‘ಹಣದುಬ್ಬರದಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾಣುತ್ತದೆ. ಈ ಬೆಲೆ ಏರಿಕೆಗೆ ತಕ್ಕಂತೆ ತಿಂಡಿ–ಊಟದ ಬೆಲೆ ಹೆಚ್ಚಿಸಿದರೆ ಗ್ರಾಹಕರು ಬರುವುದು ಕಡಿಮೆ. ಇದರಿಂದ ತಿಂಡಿ–ತಿನಿಸುಗಳ ದರವನ್ನು ಹೆಚ್ಚಿಸುವ ಗೊಡವೆಗೆ ಹೋಗುವುದಿಲ್ಲ. ಇಂದಿನ ದಿನಗಳಲ್ಲಿ ದಿನಸಿ ಬೆಲೆಗಳು ಶೇ 30ರಷ್ಟು ಹೆಚ್ಚಿವೆ. ಅಡುಗೆ ಅನಿಲ ಸಿಲಿಂಡರ್ ದರ, ಅಡುಗೆ ಎಣ್ಣೆಯ ದರ 2019ಕ್ಕೆ ಹೋಲಿಸಿದರೆ ₹ 60 ಹೆಚ್ಚಾಗಿದೆ’ ಎಂದು ಹೇಳುತ್ತಾರೆ.
‘ಕಳೆದ ವರ್ಷದ ಲಾಕ್‌ಡೌನ್‌ನಲ್ಲಿ ಕಟ್ಟಡ ಮಾಲೀಕರು ಬಾಡಿಗೆಯಲ್ಲಿ ರಿಯಾಯಿತಿ ನೀಡಿದ್ದರು. ಈ ಸಲ ರಿಯಾಯಿತಿ ನೀಡುವ ಸಾಧ್ಯತೆ ಕಡಿಮೆ. ಕೊರೊನಾ ಪ್ರತಿ ವರ್ಷವೂ ಬರುತ್ತದೆ. ಇದ್ದರೆ ಇರಿ ಇಲ್ಲವೇ ಹೋಗಿ ಎನ್ನುವ ಪರಿಸ್ಥಿತಿಯಲ್ಲಿ ಇದ್ದಾರೆ’ ಎಂದು ಸುಬ್ರಹ್ಮಣ್ಯ ಹೇಳುತ್ತಾರೆ.
‘ಪರಿಸ್ಥಿತಿ ಸುಧಾರಿಸಲು 6 ತಿಂಗಳು ಬೇಕು’
‘ಹೋಟೆಲ್‌ಗಳಿಂದ ಸರ್ಕಾರಕ್ಕೆ ಆದಾಯ ಬರುತ್ತದೆ. ಆದರೆ ಸರ್ಕಾರದಿಂದ ಹೋಟೆಲ್‌ಗಳಿಗೆ ಯಾವುದೇ ನೆರವು ನೀಡಿಲ್ಲ. ಮೂರು ತಿಂಗಳ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡುವುದಾಗಿ ಸರ್ಕಾರ ಹೇಳಿದೆ. ಆದರೆ ಮೂರು ತಿಂಗಳು ಹೋಟೆಲ್‌ಗಳು ಕಾರ್ಯನಿರ್ವಹಿಸಿಲ್ಲ. ಇದು ಯಾವ ನ್ಯಾಯ’ ಎಂದು ಪ್ರಶ್ನಿಸುತ್ತಾರೆ ಹೋಟೆಲ್ ಉದ್ದಿಮೆದಾರರ ಸಂಘದ ಗೌರವಾಧ್ಯಕ್ಷ ಅಣಬೇರು ರಾಜಣ್ಣ.
‘ಹೋಟೆಲ್‌ ಉದ್ಯಮದಿಂದ ಸಾಕಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ. ಕಾರ್ಮಿಕರಿಗೆ ಪಿಎಫ್, ಇಎಸ್‌ಐ ಸೌಲಭ್ಯ ಒದಗಿಸುತ್ತೇವೆ. ಹೋಟೆಲ್‌ಗಳಿಗೆ ₹ 50 ಲಕ್ಷ ನಷ್ಟವಾಗಿದೆ. ಗ್ರಾಮೀಣ ಭಾಗಗಳಿಂದ ಬಂದವರು ತಮ್ಮ ಕೆಲಸ ಮುಗಿಸಿ ನೇರವಾಗಿ ಮನೆಗಳಿಗೆ ತೆರಳುತ್ತಿದ್ದಾರೆ. ಅವರು ಹೋಟೆಲ್‌ಗೆ ಬರಲು ಸ್ವಲ್ಪ ಕಾಲಾವಕಾಶ ಬೇಕು. ಪರಿಸ್ಥಿತಿ ಸುಧಾರಿಸಲು 6 ತಿಂಗಳು ಬೇಕಾಗುತ್ತದೆ’ ಎನ್ನುತ್ತಾರೆ ಅವರು.
ವಹಿವಾಟು ಕುಸಿತ
‘ಜನವರಿಯಿಂದ ಮಾರ್ಚ್‌ ತಿಂಗಳವರೆಗೆ ಮೊದಲನೇ ಅಲೆ ಮುಗಿದ ಬಳಿಕ ಶೇ 60–70ರಷ್ಟು ವಹಿವಾಟು ನಡೆದಿತ್ತು. ಎರಡನೇ ಅಲೆ ಮುಗಿದ ಬಳಿಕ ಶೇ 60ಕ್ಕಿಂತಲೂ ವ್ಯಾಪಾರ ಕುಸಿತ ಕಾಣುವ ಸಂಭವವಿದೆ. 2019ರಿಂದ ಇಂದಿನ ವಹಿವಾಟಿನಲ್ಲಿ ವ್ಯಾಪಾರದಲ್ಲಿ ಶೇ 45–50ರಷ್ಟು ಇಳಿದಿದೆ’ ಎಂದು ಸುಬ್ರಹ್ಮಣ್ಯ ಹೇಳುತ್ತಾರೆ.
 ಎಗ್‌ರೈಸ್ ಹೋಟೆಲ್ ಸಂಪೂರ್ಣ ಸ್ಥಗಿತ
ಡಿ. ವಿಶ್ವನಾಥ್
ಹರಪನಹಳ್ಳಿ: ತಾಲ್ಲೂಕಿನಲ್ಲಿ ಹೋಟೆಲ್ ಉದ್ಯಮಕ್ಕೆ ಕೋವಿಡ್ ಸಾಕಷ್ಟು ಹೊಡೆತ ಕೊಟ್ಟಿದೆ. ದೂರದ ಗ್ರಾಮಗಳಿಂದ ಬಂದು ದೊಡ್ಡ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಹೋಗಿದ್ದಾರೆ.
ನಗರದಲ್ಲಿರುವ ಅಭಿರುಚಿ, ಮಧು ಮತ್ತು ರಾಮದರ್ಶನ ಹೋಟೆಲ್‌ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಕಲ್ಪಿಸಿದ್ದರೂ ವ್ಯಾಪಾರ ಅಷ್ಟಕ್ಕಷ್ಟೆ. ಕೊರೊನಾ ಸಂದರ್ಭದಲ್ಲೂ ಹೋಟೆಲ್‌ಗಳನ್ನೇ ನಂಬಿಕೊಂಡಿದ್ದ ನಾಲ್ಕೈದು ಕುಟುಂಬದವರು ತಮ್ಮ ಮನೆಗಳಿಂದಲೇ ಊಟ ತಯಾರಿಸಿ ಕೊಟ್ಟು ದುಡಿಮೆ ಕಂಡುಕೊಂಡಿದ್ದಾರೆ.
ಎಗ್‌ರೈಸ್, ಆಟೊ ಕ್ಯಾಂಟೀನ್ ಮತ್ತು ಬೀದಿ ಬದಿಯ ಹೋಟೆಲ್‌ಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ನೂರಾರು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ತಳ್ಳುವ ಬಂಡಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದವರು ಮನೆಯಲ್ಲಿರುವಂತಾಗಿದೆ.
ಕಾರ್ಮಿಕರ ಪರದಾಟ
ಎಚ್.ವಿ. ನಟರಾಜ್
ಚನ್ನಗಿರಿ: ಲಾಕ್‌ಡೌನ್‌ನಿಂದಾಗಿ ತಾಲ್ಲೂಕಿನ ಎಲ್ಲ ಹೋಟೆಲ್‌ಗಳು ಸಂಪೂರ್ಣವಾಗಿ ಮುಚ್ಚಿದ್ದವು. ಇದರಿಂದಾಗಿ ಕಾರ್ಮಿಕರು ದುಡಿಮೆ ಇಲ್ಲದೆ ಒಪ್ಪತ್ತಿನ ಊಟಕ್ಕೂ ತೊಂದರೆ ಅನುಭವಿಸುವಂತಾಗಿತ್ತು.
ಪಟ್ಟಣ ಸೇರಿ ತಾಲ್ಲೂಕಿನಲ್ಲಿ ನೂರಾರು ಹೋಟೆಲ್‌ಗಳು ಲಾಕ್‌ಡೌನ್‌ಗೂ ಮುನ್ನ ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಕಾರ್ಯದಲ್ಲಿ ತೊಡಗಿದ್ದವು. ಲಾಕ್‌ಡೌನ್‌ನಿಂದಾಗಿ ಗ್ರಾಹಕರಿಗೆ ಅನ್ನ ನೀಡುವುದು ಇರಲಿ, ತಮ್ಮ ಹೊಟ್ಟೆಗೆ ಅನ್ನ ಇಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಎರಡನೇ ವರ್ಷ ಲಾಕ್‌ಡೌನ್ ಮುಂದುವರಿದಿದ್ದರಿಂದ ಹೋಟೆಲ್ ಮಾಲೀಕರು ತುಂಬಾ ನಷ್ಟವನ್ನು ಅನುಭವಿಸಿದರು.
‘ಕಠಿಣ ಲಾಕ್‌ಡೌನ್ ಇದ್ದಿದ್ದರಿಂದ ಪಾರ್ಸೆಲ್‌ಗೂ ಅನುಮತಿ ಇರಲಿಲ್ಲ. ಒಂದು ವಾರದಿಂದ ಲಾಕ್‌ಡೌನ್ ಸಡಿಲಗೊಂಡು ಅನುಮತಿ ಸಿಕ್ಕಿದ್ದು ತುಂಬಾ ಅನುಕೂಲವಾಗಿದೆ’ ಎಂದು ಪಟ್ಟಣದ ಹೊಟೇಲ್ ಕಾರ್ಮಿಕ ಪ್ರಕಾಶ್ ತಿಳಿಸಿದರು.
‘ಮಾಲೀಕರೇ ಉದ್ಯಮ ನಡೆಸಬೇಕಾಯ್ತು’
ನಟರಾಜನ್‌
ಮಲೇಬೆನ್ನೂರು: ‘ಕೊರೊನಾ ಬಂದ ನಂತರ ಕಾರ್ಮಿಕರು ಕೆಲಸವಿಲ್ಲದ ಕಾರಣ ಊರಿಗೆ ಹೋದರು. ಮಾಲೀಕರೇ ಉದ್ಯಮ ನಡೆಸಬೇಕಾಯಿತು’ ಎಂದು ಇಲ್ಲಿನ ಹೊಟೇಲ್ ಉದ್ಯಮಿ ರಂಗನಾಥ್ ಹೊಳ್ಳ ತಮ್ಮ ಅನುಭವ ಬಿಚ್ಚಿಟ್ಟರು.
‘ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಮುಂಗಡವಾಗಿ ಹಣ ನೀಡಿ, ಕಳುಹಿಸಿಕೊಟ್ಟಿದ್ದೇವೆ. ಇದೊಂದು ಕಹಿ ಅನುಭವ’ ಎನ್ನುತ್ತಾರೆ ರಾಘವೇಂದ್ರ ಭವನ (ಪುಟ್ಟೆಗೌಡರ ಹೋಟೆಲ್) ಮಾಲೀಕ.
‘ಊಟ ತಿಂಡಿ ಪಾರ್ಸೆಲ್ ಕೊಡಬಹುದು ಎಂದು ಸರ್ಕಾರ ಆದೇಶ ನೀಡಿದೆ. ಆದರೆ, ಒಂದು ದಿನ ಗ್ರಾಹಕರು ಬಂದು ವ್ಯಾಪಾರ ನಡೆದರೆ, ಇನ್ನೊಂದು ದಿನ ಖಾಲಿ ಖಾಲಿ. ಮಾಡಿದ್ದೆಲ್ಲ ಉಳಿದು ಮುಸುರೆಗೆ ಕಳುಹಿಸಿದ ಉದಾಹರಣೆ ಇದೆ. ಗ್ರಾಮೀಣ ಪ್ರದೇಶದಿಂದ ಆಸ್ಪತ್ರೆಗೆ ಬರುವವರಿಗೆ ಸಾಕಷ್ಟು ತೊಂದರೆಯಾಗಿತ್ತು. ಹಾಲು, ಗಂಜಿ ಸಿಗುವುದೂ ಕಷ್ಟವಾಗಿತ್ತು. ಮಾನವೀಯ ನೆಲೆಯೊಳಗೆ ಕೆಲವರಿಗೆ ನಿಗದಿತ ಸಮಯದೊಳಗೆ ಸೇವೆ ಮಾಡಿದ್ದೇವೆ’ ಎಂದು ಹೇಳುತ್ತಾರೆ.
‘ಪಟ್ಟಣದ ಬಸ್ ನಿಲ್ದಾಣದ ಹೋಟೆಲ್ ಕಟ್ಟಡದ ಬಾಡಿಗೆ ಹೆಚ್ಚಾಗಿದೆ. ಟೆಂಡರ್ ಹಾಕಲು ಯಾರೂ ಮುಂದೆ ಬಾರದ ಕಾರಣ ಬೀಗ ಮುದ್ರೆ ಬಿದ್ದಿದೆ. ಅಲ್ಲಿ ಉದ್ಯಮ ನಡೆಸುವುದು ಕಷ್ಟ. ಹೀಗಾಗಿ ಬೇರೆ ಕಡೆ ಚಿಕ್ಕ ದರ್ಶಿನಿ ತೆರೆದಿದ್ದೇನೆ’ ಎನ್ನುತ್ತಾರೆ ಹಿಂದೆ ಹೋಟೆಲ್ ನಡೆಸುತ್ತಿದ್ದ ರಮೇಶ್. 
 

Bangalore , Karnataka , India , Raghavendra-hall , Bangalore-hotel , Hotel-business , District-hotel-business , Town-hotels-labor-prakash , Hotel-run-ramesh , Association-secretary , Hotel-run , பெங்களூர்

ಕೋವಿಡ್: ಹೋಟೆಲ್ ಆರೈಕೆ ಸ್ಥಗಿತ

ಕೋವಿಡ್: ಹೋಟೆಲ್ ಆರೈಕೆ ಸ್ಥಗಿತ
prajavani.net - get the latest breaking news, showbiz & celebrity photos, sport news & rumours, viral videos and top stories from prajavani.net Daily Mail and Mail on Sunday newspapers.

Manipal , Karnataka , India , Bangalore , Bangalore-hotel , Hotel-business , Center-start , May , People-tree , Columbia-asia , மணிப்பல்

ಹೋಟೆಲ್ ಆರೈಕೆ: ಶೇ 50ರಷ್ಟು ಹಾಸಿಗೆ ಖಾಲಿ

ಹೋಟೆಲ್ ಆರೈಕೆ: ಶೇ 50ರಷ್ಟು ಹಾಸಿಗೆ ಖಾಲಿ
prajavani.net - get the latest breaking news, showbiz & celebrity photos, sport news & rumours, viral videos and top stories from prajavani.net Daily Mail and Mail on Sunday newspapers.

Manipal , Karnataka , India , Bangalore , Bangalore-hotel , Nursing-the-association , Center-admin , People-tree , Columbia-asia , மணிப்பல் , கர்நாடகா

మత్తు రొంపిలో ఎమ్మెల్యేలు!

మత్తు రొంపిలో ఎమ్మెల్యేలు!
eenadu.net - get the latest breaking news, showbiz & celebrity photos, sport news & rumours, viral videos and top stories from eenadu.net Daily Mail and Mail on Sunday newspapers.

Bangalore , Karnataka , India , United-states , Nigeria , Kannadaa-bangalore-hotel , Probably-world , Telugu-hero , Bangalore-hotel , February-bangalore-east , August-her